ಹಗರಿಬೊಮ್ಮನಹಳ್ಳಿ:
ಗ್ರಾಮೀಣ ಶಿಕ್ಷಕರ ವರ್ಗಾವಣೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಕೇಳುವುದರ ಮೂಲಕ ಚರ್ಚೆ ಮಾಡುವೆ ಎಂದು ಶಾಸಕ ಭೀಮಾನಾಯ್ಕ್ ಹೇಳಿದರು.
ಅವರು ಇಂದಿಲ್ಲಿ ತಾಲೂಕ ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘದ ಪಾದಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಸಂಘದ ಮನವಿಯಂತೆ ಗ್ರಾಮೀಣ ಶಿಕ್ಷಕರಿಗೆ 2500ರೂ ಗ್ರಾಮೀಣ ಭತ್ಯೆ, ಎನ್.ಪಿ.ಎಸ್ ಸಂಪೂರ್ಣ ರದ್ದತಿ, ಸಿ ಅಂಡ್ ಆರ್ ನಿಯಮ ಬದಲಾಯಿಸಿ ಪಧವೀಧರ ಶಿಕ್ಷಕರಿಗೆ ಶೇ 75 ಭಡ್ತಿ ನೀಡುವುದು ಮತ್ತು ಕೃಪಾಂಕ ನೌಕರರ ಸಮಸ್ಯೆಗಳಿಗೆ ಪರಿಹಾರ ನೀಡುವತ್ತ ಸರಕಾರ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ಈ ಸಮಯದಲ್ಲಿ ರಾಜ್ಯ ಉಪಾಧ್ಯಕ್ಷ ಪರಮೇಶ್ವರಯ್ಯ ಸೊಪ್ಪಿಮಠ, ತಾಲೂಕ ಅಧ್ಯಕ್ಷರಾದ ಜೆಜ್ಜೂರಿ ಉಮೇಶ್, ಕಾರ್ಯಾಧ್ಯಕ್ಷರಾದ ಹೆಚ್.ತುಕಾರಾಮ್ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾದ ನಾಗರಾಜ ಯು.ಹೆಚ್. ಮತ್ತು ಪಧಾದಿಕಾರಿಗಳಾದ ಎಂ.ಸುಬಾನಿ, ಸಿ.ಗಿರೀಶ್, ಕೆ.ಗಾಳೆಪ್ಪ, ಎಸ್.ಎನ್. ಅಂಜಿನಪ್ಪ, ಎಸ್.ಎ. ಮಂಜುನಾಥ, ಎಂ.ಮಾಳ್ಗಿಸ್ವಾಮಿ, ಎಸ್.ಎಂ.ದ್ವಾರಕೀಶ, ಜಿ.ಜಯಪ್ಪ, ಎ.ನಾಗರಾಜ, ಯು.ಗೋಣಿಬಸಪ್ಪ, ರಂಗನಾಥ ಹವಲ್ದಾರ್, ಕೆ.ರಾಮಪ್ಪ, ಲಂಬಾಣಿ ಸಂತೋಷಕುಮಾರ್, ಜಿ.ನಿಂಗಪ್ಪ, ಪಿ.ಆಂಜನೇಯ, ಎಸ್.ಎಂ.ಶಾಂತಮೂರ್ತಿ, ಕೆ. ಶಿವಪ್ರಕಾಶ ಆಚಾರ್, ಎ.ಮೋಹನ್, ಕೆ.ಎಂ.ಗಂಗಾಧರಸ್ವಾಮಿ, ಹೀರ್ಯಾನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
