ಸರ್ಕಾರದ ಸೌಲಭ್ಯವನ್ನು ರೈತರು ಸದ್ಭಳಕೆಮಾಡಿಕೊಳ್ಳಲಿ:ಡಾ.ಗೂಳಪ್ಪ ಗೋಳ್

ಹಗರಿಬೊಮ್ಮನಹಳ್ಳಿ;

       ಸರ್ಕಾರದ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ||ಗೂಳಪ್ಪ ಗೋಳ್ ಕರೆ ನೀಡಿದರು.

       ಅವರು ಪಟ್ಟಣದ ಪಶುಸಂಗೋಪನೆ ಇಲಾಖೆಯ ಆವರಣದಲ್ಲಿ ಸಂಗ್ರವಾಗಿರುವ ಮೇವು ಕೇಂದ್ರದಿಂದ ಮೇವು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗುರುವಾರ ರೈತರಿಗೆ ಮೇವು ವಿತರಿಸಿ ರೈತರನ್ನುದ್ದೇಶಿಸಿ ಮಾತನಾಡಿದರು. ಮಳೆಯ ಕೊರತೆಯಿಂದ ಜಿಲ್ಲೆ ಸಂಪೂರ್ಣ ಬರಗಾಲಕ್ಕೆ ತುತ್ತಾಗಿದ್ದು, ಜಿಲ್ಲೆಯ ಮೇವಿನ ಕೊರತೆ ಇರುವ ಕಡೆ ಸರ್ಕಾರದಿಂದ ಖರೀದಿಸಿದ್ದ ಮೇವುವನ್ನು ರೈತರ ಜಾನುವಾರುಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದರು. ಈ ಸದುಪಯೋಗ ಪ್ರತಿಯೊಬ್ಬ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

         ನಂತರ ತಾ.ಪಂ.ಇಒ ಮಲ್ಲಾನಾಯ್ಕ ಮಾತನಾಡಿ, ಮೇವಿನ ಕೊರತೆ ಇರುವ ಕಡೆ ಜಾನುವಾರುಗಳು ತಾಲೂಕಿನಿಂದ ಮೇವು ಹರಸಿ ಬೇರೆಡೆ ಹೋಗಬಾರದೆಂದು ಸರ್ಕಾರವೇ ಕಾಳಜಿ ವಹಿಸಿ ಮೇವು ವಿತರಣೆಗೆ ಮುಂದಾಗುತ್ತಿದ್ದು. ಬೇರೆಡೆ ಲಭ್ಯವಿರುವ ಮೇವು ಖರೀದಿಸಿ ಕೊರತೆ ಇರುವ ಕಡೆ ಮೇವಿನ ಬರ ನೀಗಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

        ಪಶುಸಂಗೋಪನೆ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ||ದೇವಗಿರಿ ಮಾತನಾಡಿ, ಕೋಗಳಿ ಹೋಬಳಿಯಲ್ಲಿ ಸುಮಾರು 4058 ಜಾನುವಾರುಗಳಿದ್ದು, ಈಗ ಈ ಭಾಗದಲ್ಲಿ ಮೇವು ವಿತರಣೆ ಕಾರ್ಯ ಗುರುವಾರದಿಂದ ಆರಂಭವಾಗಿದ್ದು, ಒಂದು ಹಸುವಿಗೆ ಕನಿಷ್ಟ ಒಂದು ತಿಂಗಳಿಗೆ 150ಕೆ.ಜಿ. ಮೇವು ವಿತರಣೆ ಮಾಡಲಾಗುತ್ತದೆ. ದಿನವೂಂದಕ್ಕೆ ಒಂದು ಹಸುವಿಗೆ 5ಕೆ.ಜಿ. ಮೇವು ಸಾಕಾಗುತ್ತೆ ಎಂದರು. ಮೇವು ಸಂಗ್ರಹ ಕೇಂದ್ರದಲ್ಲಿ ಒಟ್ಟು 65.750ಟನ್ ಭತ್ತದ ಮೇವು ಸಂಗ್ರವಾಗಿದೆ.

          ಅಲ್ಲದೆ, ಕೋಗಳಿ ಹೋಬಳಿ ಕೇಂದ್ರದಲ್ಲಿ ಕೋಗಳಿ, ಕೋಗಳಿ ತಾಂಡ, ಅಲಬೂರು, ಕನ್ನಿಹಳ್ಳಿ, ಹೊನ್ನಿಹಳ್ಳಿ, ದಿಬ್ಬದಹಳ್ಳಿ, ಮೂರು ನೆಲ್ಲುಕುದರಿಗಳು, ಚಿಮ್ನಳ್ಳಿ, ಕೋಡಿಹಳ್ಳಿ, ಅಂಬಳಿ, ಕುಡುತ್ತಿನಿಮಗ್ಗಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಈ ಮೊದಲ ಸುತ್ತಿನ ಮೇವು ವಿತರಣೆಯ ಫಲಾನುಭವಿಗಳಾಗಿದ್ದಾರೆ. ರೈತರು ತಮ್ಮ ಆಧಾರ್ ಕಾರ್ಡ್, ವೈದ್ಯಾಧಿಕಾರಿಯ ದೃಢಿಕರಣ ಪತ್ರದೊಂದಿಗೆ ಮೇವು ವಿತರಣೆಯನ್ನು ಪಡೆಯಬಹುದಾಗಿದೆ ಎಂದರು.

        ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಟಿ.ರಾಜಣ್ಣ, ಡಾ||ಜಿ.ರಾಘವೇಂದ್ರ, ಡಾ||ಪ್ರಮೋದ್, ಡಾ||ಪ್ರವೀಣ್, ಡಾ||ಚಮನ್‍ಮಲಿ, ಗ್ರಾಮಲೆಕ್ಕಾಧಿಕಾರಿ ಭಾರತಿ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap