ಹುಳಿಯಾರು:
ಪಟ್ಟಣದ ಗೊಬ್ಬರದ ಅಂಗಡಿಯಲ್ಲಿ ಅವಧಿ ಮುಗಿದ ಔಷಧ ಮಾರಾಟ ಮಾಡಿರುವ ಬಗ್ಗೆ ರೈತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕ್ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಶುಕ್ರವಾರ ಮಾರಾಟ ಮಾಡಿದ ಮಳಿಗೆಗೆ ಭೇಟಿ ಇತ್ತು ಪರಿಶೀಲನೆ ನಡೆಸಿದರು.
ಕಳೆದ ಮೂರು ದಿನಗಳ ಹಿಂದೆ ಹುಳಿಯಾರಿನ ಮುಸ್ತಾಫ ಟ್ರೇಡರ್ಸ್ ನಲ್ಲಿ ಔಷಧಿಯ ಅವಧಿ ಮೀರಿದ್ದರು ಮಾರಾಟ ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಿದ ರೈತರಿಗೆ ಸರಿಯಾದ ಉತ್ತರ ನೀಡದೆ ಉಡಾಫೆ ಉತ್ತರ ನೀಡಿ ಔಷಧಿ ಅವಧಿ ಮೀರಿದ್ದರೂ ಏನೂ ಆಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರದ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದರು.ಅಲ್ಲಿಂದ ಪಟ್ಟಣದ ಉಳಿದ ಗೊಬ್ಬರದ ಅಂಗಡಿಗಳಿಗೆ ಭೇಟಿ ಇತ್ತು ಔಷಧಿ ಸೇರಿದಂತೆ ಗೊಬ್ಬರ ಮತ್ತಿತರ ವಸ್ತುಗಳ ದಾಸ್ತಾನು ಪರಿಶೀಲನೆ ಮಾಡಿದರು.
ನಂತರ ಮಾತನಾಡಿ, ರೈತರ ದೂರನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗಿದ್ದು, ಉತ್ತರ ನೀಡುವಂತೆ ಅವಧಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಪಟ್ಟಣದ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಹೆಚ್ಚು ಬೆಲೆಗೆ ಹಾಗೂ ಅವಧಿ ಮುಗಿದ ಔಷಧಿ ಮಾರಾಟ ಮಾಡದಂತೆ ತಿಳಿಸಲಾಗಿದೆ. ಮತ್ತೊಮ್ಮೆ ರೈತರಿಂದ ದೂರುಗಳು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮಾರಾಟ ಮಾಡಿದ್ದ ಔಷಧಿ ಹಣವನ್ನು ರೈತನಿಗೆ ಹಿಂದಿರುಗಿಸುವಂತೆ ತಾಕೀತು ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಹುಳಿಯಾರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕರಿಬಸವಯ್ಯ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
