10 ಮಹಿಳಾ ಹೊಸ ಪೊಲೀಸ್ ಠಾಣೆ ಆರಂಭಿಸಿ : ನಾಗಲಕ್ಷ್ಮಿ ಬಾಯಿ

ಬೆಂಗಳೂರು

        ರಾಜಧಾನಿ ಬೆಂಗಳೂರಿನಲ್ಲಿಮಹಿಳೆಯರ ಮೇಲೆ ಅತ್ಯಾಚಾರ ಲೈಂಗಿಕ ಕಿರುಕುಳ ದೌರ್ಜನ್ಯ ಕೃತ್ಯಗಳು ಹೆಚ್ಚುತ್ತಿರುವುದರಿಂದ ನಗರದಲ್ಲಿ ಕನಿಷ್ಟ 10 ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಆಗ್ರಹಿಸಿದ್ದಾರೆ.

       ವಿಧಾನಸೌಧದ ಮುಂಭಾಗ ಕರ್ನಾಟಕ ಮಹಿಳಾ ಪೊಲೀಸರ ಸೈಕಲ್ ಯಾತ್ರೆಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು 1 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ನಗರದಲ್ಲಿ 50ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಕೇವಲ 2 ಮಹಿಳಾ ಪೆÇಲೀಸ್ ಠಾಣೆಗಳಿಂದ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದು ಆಸಾಧ್ಯಎಂದರು.

       ಅತ್ಯಾಚಾರ ಲೈಂಗಿಕ ಕಿರುಕುಳ ದೌರ್ಜನ್ಯಕ್ಕೊಳಗಾದ ಮಹಿಳೆಯರು, ಪುರುಷ ಅಧಿಕಾರಿಯ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಅದೇ ಮಹಿಳಾ ಅಧಿಕಾರಿಯಿದ್ದರೆ ತನಗಾದ ನೋವನ್ನು ಹೇಳಿಕೊಳ್ಳುವುದು ಸುಲಭವಾಗಲಿದೆ ಅದರಿಂದಾಗಿ ನಗರದಲ್ಲಿ ಕನಿಷ್ಠ 10 ಪೊಲೀಸ್ ಠಾಣೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

      ಮಹಿಳಾ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತರಬೇಕು. ಅದಕ್ಕೆ ಪರಿಹಾರವನ್ನು ಒದಗಿಸಲಾಗುವುದು. ದೂರು ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು ಅಲ್ಲದೇ ನೊಂದವರಿಗೆ ನೆರವು ದೊರಕಿಸಲು ಶ್ರಮಿಸಲಾಗುವುದು ಎಂದು ಅವರು ತಿಳಿಸಿದರು.

      ಹೆಣ್ಣು ಅಬಲೆಯಲ್ಲ, ಸಬಲೆ ಎಂದು ನಿರೂಪಿಸುವ ಕಾಲ ಬಂದಿದೆ. ಹೆಣ್ಣು ಮಕ್ಕಳು ಸಮರ್ಥವಾಗಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದ ಅವರು ನಗರದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಹೆಚ್ಚು ಜಾಗೃತಿಯಿದೆ ಉಂಟಾಗಿದೆ. ಗ್ರಾಮಪ್ರದೇಶಗಳಲ್ಲಿನ ಮಹಿಳೆಯರಿಗೆ ಜಾಗೃತಿಉಂಟು ಮಾಡುವ ಕೆಲಸ ಆಗಬೇಕಿದೆ ಹೆಣ್ಣು ಅಬಲೆಯಲ್ಲ, ಸಬಲೇ ಎಂಬುದು ಮಾತುಗಳಷ್ಟೇ ಉಳಿಯಬಾರದು ಕೃತಿಯಲ್ಲೂ ಬರಬೇಕು ಎಂದು ಹೇಳಿದರು.

      ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರು ಇಂತಹ ಸೈಕಲ್ ಜಾಥಾಗೆ 25 ಲಕ್ಷ ರೂಪಾಯಿಗಳ ವಿಶೇಷ ಅನುದಾನ ಮತ್ತು ಒಲಿಂಪಿಕ್ ಸಂಸ್ಥೆಯಿಂದ 25 ಲಕ್ಷ ಸೈಕಲ್‍ಗಳು ಅಗತ್ಯ ಬಿದ್ದಲ್ಲಿ ವಿವಿಧ ದಾನಿಗಳಿಂದ ಇನ್ನು 25 ಲಕ್ಷ ಸೈಕಲ್‍ಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

      ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡುವ ಸಂಬಂಧ ಪ್ರಸ್ತಾವನೆ ಕೊನೆಯ ಹಂತಕ್ಕೆ ತಲುಪಿದ್ದು, ಸಚಿವ ಸಂಪುಟದ ಮುಂದೆ ಬರುವ ಸಾಧ್ಯತೆಗಳಿದೆ ಎಂದು ಅವರು ಹೇಳಿದರು.. ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಸಾದ್,ಮಾಲಿನ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

        ಕಳೆದ ಡಿ. 5 ರಿಂದ ಬೆಳಗಾವಿಯಿಂದ ಬೆಂಗಳೂರಿಗೆ 540 ಕಿಲೋ ಮೀಟರ್ ದೂರದ ಮಹಿಳಾ ಪೊಲೀಸ್ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ಸುಮಾರು 540 ಕಿಲೋ ಮೀಟರ್ ಉದ್ದದ ರ್ಯಾಲಿಯಲ್ಲಿ ಪಾಲ್ಗೊಂಡ ಮಹಿಳೆಯರು ಭಾನುವಾರ ನಗರಕ್ಕೆ ಆಗಮಿಸಿ ಸಮಾರೋಪದಲ್ಲಿ ಪಾಲ್ಗೊಂಡಿದ್ದರು.ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ಭಾಸ್ಕರ್ ಅವರು ರ್ಯಾಳಿಯನ್ನು ಸ್ವಾಗತಿಸಿದರು

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap