ಬೆಂಗಳೂರು:
ಕುಮಾರ ಸ್ವಾಮಿ ಸಂಪುಟದ ಸಚಿವರೊಬ್ಬರು ಬಿಬಿಎಂಪಿಯಲ್ಲಿ ತೆರಿಗೆ ಕಟ್ಟದೇ ಉಳಿಸಿಕೊಂಡಿದ್ದಾರೆ ಹೀಗಿರುವಾಗ ಬಿಬಿಎಂಪಿ ಆರ್ಥಿಕವಾಗಿ ಸಬಲವಾಗಬೇಕು ಎಂದು ಎಷ್ಟು ಭಾಷಣ ಮಾಡಿದರು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಎಲ್ಲರೂ ಆಸ್ತಿ ತೆರಿಗೆ ಕಟ್ಟಬೇಕು ಎಂದು ಬೊಬ್ಬೇ ಹೊಡೆದರೆ ಪ್ರಯೋಜನವಿಲ್ಲ ಎಂದು ಅರಿವಾಗುವುದು ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ವಿಪರ್ಯಾಸವೆಂದರೆ ಗಣ್ಯಾತಿಗಣ್ಯರು ತೆರಿಗೆ ಕಟ್ಟದ ಸುದ್ದಿ ಈಗಾಗಲೇ ಸದ್ದು ಮಾಡಿದೆ.
ಸರ್ಕಾರದ ಆ ಮಂತ್ರಿ ಬೇರೆಯಾರು ಅಲ್ಲ ಶ್ರೀ ಜಮೀರ್ ಅಹಮದ್ ಅವರು ಆಸ್ತಿ ತೆರಿಗೆ ಬಾಕಿ ಕಟ್ಟಿಲ್ಲ. ಈ ವಿಚಾರದ ಬಗ್ಗೆ ಕಂದಾಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ದಾಖಲೆಗಳ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ