ವಿನಯ್ ಅಪಹರಣ ಪ್ರಕರಣ :ಸಂತೋಷ್ ಗೆ ಬಿಗ್ ರಿಲೀಫ್…!!!

ಬೆಂಗಳೂರು

        ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರ ಅಪ್ತ ಸಹಾಯಕ ಸಂತೋಷ್‍ಗೆ ಬಿಗ್ ರಿಲೀಫ್ ಸಿಕ್ಕಿದೆ.

         ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಯತ್ನ ಪ್ರಕರಣ ದಾಖಲಾಗಿದ್ದು ನಂತರ ಈ ಪ್ರಕರಣವನ್ನ ನಗರ ಪೆÇಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು.

      ಸಿಸಿಬಿ ತನಿಖೆ ಪ್ರಶ್ನಿಸಿ ಸಂತೋಷ್ ಹೈಕೋಟ್‍ಗೆ ಅರ್ಜಿ ಸಲ್ಲಿಸಿದ್ದು ಅರ್ಜಿ ವಿಚಾರಣೆ ಹೈಕೋರ್ಟ್ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.ಕೋರ್ಟ್‍ನಲ್ಲಿ ಯಡಿಯೂರಪ್ಪ ಪಿಎ ಸಂತೋಷ್ ಪರ ವಕೀಲರು ವಾದ ಮಾಡಿ, ಈಗಾಗಲೇ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮತ್ತೆ ಸಿಸಿಬಿ ಮರು ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್‍ಗೆ ಮನವಿ ಮಾಡಿದ್ದರು.

        ಕಳೆದ ವರ್ಷ ಮೇ11ರಂದು ಇಸ್ಕಾನ್ ದೇವಲಾಯದ ಬಳಿ 8 ಮಂದಿ ತಂಡ ವಿನಯ್‍ನನ್ನು ಅಪಹರಣ ಮಾಡಲು ಪ್ರಯತ್ನಿಸಿತ್ತು.ಈ ಸಂಬಂಧ ಮಹಾಲಕ್ಷೀ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತ್ರ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಎಂದು ವಿನಯ್ ಆರೋಪ ಮಾಡಿದರು. ಈ ಹಿನ್ನೆಲೆ ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ