ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು-ನ್ಯಾ,ಬಿ.ಜಿ.ದಿನೇಶ್

ಹೊಸದುರ್ಗ:

     ಮಗು ಶಿಕ್ಷಣದಿಂದ ವಂಚಿತವಾಗಬಾರದು, ದೇಶದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ವ್ಯವಸ್ಥೆಯನ್ನುತಡೆ ಹಿಡಿಯುವ ಹೊಣೆ ನಮ್ಮಕೈಯಲ್ಲಿದೆಎಂದುಇಲ್ಲಿನ ಜೆಎಂಎಫ್‍ಸಿ ಹಿರಿಯಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.

      ಅವರು ಪಟ್ಟಣದತಾಲ್ಲೂಕುಕಛೇರಿಆವರಣದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವುಕಾರ್ಯಕ್ರಮಅಂಗವಾಗಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಗೆ ತೆರಳಿ ಶಿಕ್ಷಣಕಲಿಯಬೇಕಾದ ಮಕ್ಕಳನ್ನು ಕೂಲಿ ಕೆಲಸಕ್ಕೆ ಪೋಷಕರು ಕಳುಹಿಸುತ್ತಿದ್ದಾರೆ.ಸಮಾಜದ ಪ್ರಜ್ಞಾವಂತ ನಾಗರೀಕರು ಇದನ್ನು ಕಂಡು ಕಾಣದಂತೆ ವರ್ತಿಸುವುದು ಸಮಂಜಸವಲ್ಲ. ಈ ಪದ್ದತಿಯನ್ನು ನಿರ್ಮೂಲನೆಗೊಳಿಸಲು ವಿವಿಧ ಇಲಾಖೆಗಳು ಶ್ರಮಿಸುತ್ತಿದ್ದರೂಇದಕ್ಕೆ ಸಮುದಾಯದ ಸಹಬಾಗಿತ್ವಅಗತ್ಯಎಂದರು.

       ದೇಶದ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಕಲಿಯಬೇಕು.ಮಕ್ಕಳ ಶಿಕ್ಷಣ ವ್ಯವಸ್ಥೆಯ ಹಕ್ಕನ್ನು ಕಸಿದುಕೊಳ್ಳವವರನ್ನು ತಡೆಯಬೇಕು.14 ವರ್ಷದೊಳಗಿನ ಮಕ್ಕಳನ್ನು ಕಾರ್ಮಿಕ ವರ್ಗಕ್ಕೆತೆಗೆದುಕೊಂಡರೆ ಕಾನೂನು ರೀತಿಯಲ್ಲಿಅಪರಾಧ ಮಾಡಿದಂತೆ.ಮಕ್ಕಳಲ್ಲಿ ಮಾಡಿಸುವ ಕೆಲಸಗಳು ಅವರ ಶಿಕ್ಷನಕ್ಕೆ ಮಾರಕವಾಗಬಾರದು.ಶುಭ್ರವಾದ, ಶ್ವೇತವಾದ ಒಳ್ಳೆಯ ಭಾವನೆಗಳು ಮಕ್ಕಳ ಮನಸ್ಸಿನಲ್ಲಿರುತ್ತದೆ.ಇಳೆ ವಯಸ್ಸಿನಲ್ಲಿಯೇ ಕಾರ್ಮಿಕ ವರ್ಗಕ್ಕೆ ತಳ್ಳಿದರೆ ಅವರ ಶಿಕ್ಷಣವನ್ನು ಕಸಿದುಕೊಂಡಂತಾಗುತ್ತದೆ ಎಂದರು.

      ತಹಶೀಲ್ದಾರ್ ಹೆಚ್.ಬಿ.ವಿಜಯಕುಮಾರ್ ಮಾತನಾಡಿಮಕ್ಕಳಲ್ಲಿ ಬಾಲ್ಯ ಪದೇ ಪದೇ ಬರುವಂಥದ್ದಲ್ಲ, ಬಾಲ್ಯಅಮೂಲ್ಯವಾದುದ್ದು, ದೇಶದಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬೇಕು.ಈ ದೇಶದಲ್ಲಿ ಅನೇಕ ಅಲೆಮಾರಿ ಸಮುದಾಯದವರು ಕೆಲಸಕ್ಕಾಗಿ ಊರೂರುತಿರುಗಿ ಗುಳೆ ಹೋಗುತ್ತಿದ್ದಾರೆ.ಅದರಂತೆಅವರಮಕ್ಕಳು ಕೂಡಅವರಜೊತೆ ಹೋದಾಗಶಿಕ್ಷಣ ವಂಚಿತರಾಗುತ್ತಿದ್ದಾರೆ.ಶಿಕ್ಷಣ ಇಲಾಖೆಯವರು ಈ ಅಲೆಮಾರಿ ಸಮುದಾಯವರನ್ನು ಗುರುತಿಸಿ ಅವರ ವಿಧ್ಯಾಭ್ಯಾಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಕಾರ್ಯ ಮಾಡಬೇಕಿದೆಎಂದರು.

     ಇದೇ ವೇಳೆ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪೂರ, ಅಪರ ಸಿವಿಲ್ ನ್ಯಾಯಾಧೀಶರಾದಗಂಗಾಧರ್ ಬಡಿಗೇರ್, ವಕೀಲರ ಸಂಘದಅಧ್ಯಕ್ಷಎಸ್.ಎಸ್‍ಕಲ್ಮಠ್, ಕ್ಷೇತ್ರಶಿಕ್ಷಣಾಧಿಕಾರಿ ಎಲ್.ಜಯಪ್ಪ, ಕಾರ್ಮಿಕಅಧಿಕಾರಿರಾಜಣ್ಣ, ಪ್ರೋಪಷನರಿ ಪಿಎಸ್‍ಐ ನಾಗರಾಜ್, ಆರಕ್ಷಕ ಸಿಬ್ಬಂದಿ ತ್ಯಾಗರಾಜ್ ನಾಯ್ಕ್, ಕಂದಾಯಇಲಾಖೆಯಉಮೇಶ್, ವಕೀಲೆ ಮಮತ ಮತ್ತುಕವಿತಾ ಹಾಗೂ ಮಕ್ಕಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link