ಹಾನಗಲ್ :
ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಆರಂಭವಾಗಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮುಂಬರುವ ಎಂ.ಪಿ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದು ವಿ.ಪ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ನಗರದ ಖಾಸಗಿ ಹೋಟಲ್ ಒಂದರಲ್ಲಿ ಹಾನಗಲ್ಲ ವಿಧಾನ ಸಭಾಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಎರಡು ಬಾರಿ ಹಾವೇರಿ ಎಂಪಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯು ಸೋಲು ಕಂಡಿದನ್ನು ಗಮನದಲ್ಲಿ ಇಟ್ಟುಕೊಂಡು ಕೆಪಿಸಿಸಿ ನಿರ್ದೇಶನದಂತೆ ಭೂತಮಟ್ಟದ ಪಕ್ಷ ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತ ಕಾರ್ಯವಾಗಬೇಕಿದೆ. ಹಾಗಾಗಿ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿರುವ ಪ್ರತಿ ಗ್ರಾ.ಪಂ ನಲ್ಲಿ ಪಕ್ಷ ಉಸ್ತುವಾರಿ, ಹಾಗೂ ಜವಾಬ್ದಾರಿಗಾಗಿ ವಿಶೇಷ ಸಂಯೋಜಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಅವರಿಗೆ ಪಕ್ಷ ಸಂಘಟನೆ ಮಾಡಲು ಭೂತಮಟ್ಟದ ಕಾರ್ಯಕರ್ತರು ಶಕ್ತಿ ನೀಡಬೇಕು ಮುಂಬರುವ ಕಾಂಗ್ರೆಸ್ ಎಂಪಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸಿ ಪ್ರಾಮಾಣಿಕ ಕೆಲಸಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟನೆ ಮಾಡಲಾಗಿದೆ. ಕಳೆದ ವರ್ಷದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧೆ ಮಾಡಿ ಅಲ್ಪ ಮತದಿಂದ ಸೋಲು ಕಂಡಿರುವ ಬೇಸರ ನನಗಿಲ್ಲ ತಮ್ಮೇಲ್ಲರ ಶಕ್ತಿಯಿಂದ ನಾನು ಅಲ್ಪಮತದಿಂದ ಸೋತಿದ್ದೇನೆ.
ಆದರೆ ಮುಂದಿನ ಎರಡು ಮೂರು ತಿಂಗಳಲ್ಲಿ ಎಂಪಿ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ತಾವೇಲ್ಲರೂ ಶ್ರಮಿಸಬೇಕು. ತಾಲೂಕಿನ 42 ಗ್ರಾ.ಪಂನಲ್ಲಿ ಪ್ರತಿ ಪಂಚಾಯತಿಗೆ ಒಬ್ಬರಂತೆ ಸಂಯೋಜಕರಾಗಿ ನೇಮಕವಾಗಿರುವ ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಅಡಿಯಲ್ಲಿ ಪ್ರತಿ ಮನೆಯಲ್ಲಿಯೂ ಪಕ್ಷದ ಪರವಾಗಿ ಕಾಂಗ್ರೆಸ್ ಪಕ್ಷದ ಸಾಧನೆ ತಿಳಿಸಿ ಪ್ರಸ್ತುತ ಮೈತ್ರಿ ಸರಕಾರದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಸಾಧನೆ ಹಾಗೂ ಕಳೆದ ಬಾರಿ ಮಾಜಿ ಸಿಎಂ ಸಿದ್ಧರಾಮಯ್ಯನವರ ಅಭಿವೃದ್ಧಿ ಬಗ್ಗೆ ತಿಳಿ ಹೇಳಿ ಪಕ್ಷ ಎಂಪಿ ಚುನಾವಣೆ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾನಗಲ್ಲ ವಿಧಾನ ಕ್ಷೇತ್ರದ ಜಿ.ಪಂ ಸದಸ್ಯರಾದ ಟಾಕನಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಗನಗೌಡ ಪಾಟೀಲ್, ಪುಟ್ಟಪ್ಪ ನೆರೆಗಲ್ಲ, ತಾ.ಪಂ ಅಧ್ಯಕ್ಷ ಸಿದ್ಧಪ್ಪ ಹಿರಗಪ್ಪನವರ , ಎ.ಎಂ. ಪಠಾಣ, ಸುರೇಶ ದೊಡ್ಡಕುರಬರ, ಬಸವರಾಜ ಹಾದಿಮನಿ, ಸೇರಿದಂತೆ ತಾ.ಪಂ ಸದಸ್ಯರು, ಗ್ರಾ.ಪಂ ಸದಸ್ಯರು, ಜಿ.ಪಂ ಸದಸ್ಯರು ಪಕ್ಷದ ಮುಖಂಡರು. ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
