ನವದೆಹಲಿ:
ಕೇಂದ್ರ ಚುನಾವಣಾ ಆಯೋಗ, ಇಡೀ ದೇಶವೇ ತೀವ್ರ ಕೂತುಹಲದಿಂದ ಕಾಯುತ್ತಿದ್ದ 2024ರ ಲೋಕಸಭೆ ಚುನಾವಣೆಗೆ ಶನಿವಾರ ಮೂಹುರ್ತ ಫಿಕ್ಸ್ ಮಾಡಿದ್ದು, ಏಪ್ರಿಲ್ 19 ರಿಂದ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಇಂದು ದೆಹಲಿಯ ವಿಜ್ಞಾನಭವನದಲ್ಲಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾವು ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಮುಖ್ಯ ಚುಮಾವಣಾ ಆಯುಕ್ತ ರಾಜೀವ್ ಕುಮಾರ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. 2ನೇ ಹಂತದ ಮತದಾನ 26ನೇ ಏಪ್ರಿಲ್, 3ನೇ ಹಂತದ ಮತದಾನ 7ನೇ ಮೇ, 4ನೇ ಹಂತದ ಮತದಾನ 13 ಮೇ, 5ನೇ ಹಂತದ ಮತದಾನ 20 ಮೇ, 6ನೇ ಹಂತದ ಮತದಾನ 25 ಮೇ, ಕೊನೆಯದಾಗಿ 7ನೇ ಹಂತದ ಮತದಾನ 1 ಜೂನ್‌ರಂದು ನಡೆಯಲಿದೆ. ಜೂನ್ 4ರಂದು ಮತ ಏಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಮೊದಲ ಹಂತದ ಮತದಾನ, ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲು ದೇಶದ ವಿವಿಧೆಡೆ 26 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲಾಗುತ್ತದೆ. ಏಪ್ರಿಲ್ 26 ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಮೊದಲು ಮತದಾನ ನಡೆಯಲಿದೆ. ಬಳಿಕ ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ದೇಶಾದ್ಯತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣೆಗೆ 55 ಲಕ್ಷ ಮತ ಯಂತ್ರಗಳನ್ನು ಬಳಸಲಾಗುತ್ತದೆ. 10 ಲಕ್ಷದ 5 ಸಾವಿರ ಮತಗಟ್ಟೆಗಳನ್ನು ಬಳಸಲಾಗುತ್ತದೆ. ಈ ಬಾರಿ 49.70 ಕೋಟಿ ಪುರುಷ ಮತದಾರರು ಇದ್ದಾರೆ. ಮಹಿಳಾ ಮತದಾರರು 47.10 ಕೋಟಿ ಮತದಾರರು ಇದ್ದಾರೆ. ಮೊದಲ ಬಾರಿ ಮತ ಚಲಾಯಿಸುವ ಮತದಾರರ ಸಂಖ್ಯೆ 19 ಕೋಟಿ ಮತದಾರರು ಇದ್ದಾರೆ.
48 ಸಾವಿರ ಮಂದಿ ತೃತೀಯ ಲಿಂಗಿ ಮತದಾರರು, 85 ವರ್ಷದ ದಾಟಿ 82 ಲಕ್ಷ ಮತದಾರರು ಮತದಾರರು, ವಿಶೇಷಚೇತನರಿಗೆ ಮನೆಯಿಂದಲೇ ಮತ ಚಲಾಯಿಸಲಿದ್ದಾರೆ. 2.18 ಲಕ್ಷ ಮಂದಿ ಶತಾಯುಷಿಗಳು ಮತದಾರರು ಇದ್ದಾರೆ. ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಗುರಿ ಎಂದು ಆಯುಕ್ತರು ತಿಳಿಸಿದ್ದಾರೆ.ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಇದ್ದರೆ ಕಡ್ಡಾತ ಮಾಹಿತಿ ನೀಡಬೇಕಿರುತ್ತದೆ. ಅಕ್ರಮವಾಗಿ ಹಣ ಸಾಗಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಕಂಟ್ರೋಲ್ ರೂಂ ಇರುತ್ತದೆ. ಮತದಾರರಿಗೆ ದುಡ್ಡು ಹಂಚಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸದನ ರಚನೆಯಾಗಬೇಕಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಯಿತು ಮತ್ತು ಏಪ್ರಿಲ್ 11 ರಿಂದ ಏಳು ಹಂತಗಳಲ್ಲಿ ನಡೆಸಲಾಯಿತು. ಮತಗಳನ್ನು ಮೇ 23 ರಂದು ಎಣಿಕೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ