ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ

ಚಳ್ಳಕೆರೆ

           ನೂತನ ಜಿಲ್ಲಾಧಿಕಾರಿ ವಿನೂತ್ ಪ್ರಿಯಾ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಲು ಶುಕ್ರವಾರ ವಿವಿಧ ಕಚೇರಿ ಹಾಗೂ ಶಾಲೆಗಳಿಗೆ  ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು.

           ಪ್ರಾರಂಭದ ಹಂತದಲ್ಲಿ ವೆಂಕಟೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಎಸ್‍ಜೆಂ ಪಾಲಿಟೆಕ್ನಿಕ್‍ಗೆ ಭೇಟಿ ನೀಡಿದ ಅವರು, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕರೇಕಲ್ ಕೆರೆ ಬೆಂಕಿ ದುರಂತದ ನೊಂದ ಜನರಿಗೆ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದರು. ಅಲ್ಲಿಂದ ಗಾಂಧಿನಗರ ಅಂಗನವಾಡಿ ಕೇಂದ್ರ, ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರು.

           ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ ಮತ್ತು ವೈದ್ಯರೊಂದಿಗೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ತುರ್ತು ಚಿಕಿತ್ಸಾ ಘಟಕ, ಪ್ರಯೋಗಾಲಯ, ಔಷಧ ವಿತರಣಾ ಕೇಂದ್ರ, ಔಷಧ ದಾಸ್ತಾನು ಕೇಂದ್ರ, ಐಸಿಯು ಘಟಕ, ಬಾಣಂತಿ ವಾರ್ಡ್, ಹೆರಿಗೆ ಕೇಂದ್ರ ಹಾಗೂ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯರಿಗೆ ಸೂಚನೆ ನೀಡಿದ ಅವರು, ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯ ಆರೋಗ್ಯದ ಬಗ್ಗೆ ಉತ್ತಮ ಚಿಕಿತ್ಸೆ ನೀಡಬೇಕು, ರೋಗಿಯೊಂದಿಗೆ ಸೌಹಾರ್ಥತೆಯಿಂದ ವರ್ತಿಸಬೇಕು. ಸರ್ಕಾರದಿಂದ ಔಷಧ ಹಾಗೂ ಇತರೆ ಅಗತ್ಯ ವಸ್ತುಗಳು ಸಕಾಲದಲ್ಲಿ ಸರಬರಾಜು ಆಗದೇ ಇದ್ದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಸಾರ್ವಜನಿಕರ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಈ ಆಸ್ಪತ್ರೆ ಗುಣಾತ್ಮಕ ರೋಗನಿವಾರಣಾ ಕೇಂದ್ರವಾಗಬೇಕು. ನಿಮ್ಮ ಸೇವೆಯ ಬಗ್ಗೆ ಎಲ್ಲಾ ಜನರಲ್ಲೂ ಆತ್ಮವಿಶ್ವಾಸ ಮೂಡುವಂತಿರಬೇಕು ಎಂದರು.

              ಈ ಸಂದರ್ಭದಲ್ಲಿ ಡಾ.ಸತೀಶ್‍ಆದಿಮನಿ, ಅಮೀತ್‍ಗುಪ್ತ, ಡಾ.ಜಯಲಕ್ಷ್ಮಿ, ಡಾ.ಬಿ.ಆರ್.ಮಂಜಪ್ಪ, ಡಾ.ಪ್ರಜ್ವಲ್ ಧನ್ಯ, ಮ್ಯಾಟ್ರನ್ ಸಾಂತಮ್ಮ, ಕಿರಣ್, ಶುಶ್ರೂಷಕಿಯರಾದ ಪಾರ್ವತಮ್ಮ, ನಾಗರತ್ನ, ಪುಟ್ಟರಂಗಮ್ಮ, ಎಂ.ಸಿ.ಪೂರ್ಣಿಮಾ, ಹೊನ್ನಾವತಿ, ಓಂಕಾರಮ್ಮ, ಸುಮಿತ್ರಮ್ಮ, ನಿರ್ಮಲ, ಹರೀಶ್ ಮುಂತಾದವರು ಉಪಸ್ಥಿತರಿದ್ದರು.

               ಸ್ವಚ್ಚತೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ :- ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ನಗರಸಭೆಯ ಆಡಳಿತಾಧಿಕಾರಿಯೂ ಸಹ ಆಗಿದ್ದು, ನಗರಸಭೆ ಕಚೇರಿಗೆ ಭೇಟಿ ನೀಡಿದ ಕೆಲವೊಂದು ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಪೌರಾಯುಕ್ತ ಜೆ.ಟಿ.ಹನುಮಂತರಾಜು, ಸಿಬ್ಬಂದಿ ವರ್ಗವನ್ನು ಪರಿಚಯಿಸಿದರು. ನಗರಸಭೆ ನಗರದ ನಾಗರೀಕರಿಗೆ ಎಲ್ಲಾ ರೀತಿಯ ಮೂಲಸೌಲಭ್ಯವನ್ನು ಪ್ರಾಮಾಣಿಕವಾಗಿ ಒದಗಿಸಬೇಕಿದೆ.

          ವಿಶೇಷವಾಗಿ ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ. ಚಳ್ಳಕೆರೆ ನಗರದ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಬೆಳವಣಿಗೆಗೆ ತಕ್ಕಂತ ಸೌಭ್ಯ ಒದಗಿಸುವಂತೆ ಸೂಚಿಸಿದರು. ಸಮಾಜ ಸೇವಕ ಎಚ್.ಎಸ್.ಸೈಯದ್ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಅನುಮತಿ ಇಲ್ಲದೆ ಮಾಂಸದಂಗಡಿಗಳು ಎಲ್ಲಂದರಲ್ಲೆ ತಲೆ ಎತ್ತಿದ್ದು, ನಿಯಂತ್ರಿಸುವಂತೆ ಮನವಿ ಮಾಡಿದರು. ನಗರದ ಎಸ್‍ಬಿಐ ಶಾಖಾ ಕಟ್ಟಡದಲ್ಲಿ ಗ್ರಾಹಕರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿದ್ದು, ಸಿಬ್ಬಂದಿ ಹೆಚ್ಚಳ, ಬ್ಯಾಂಕ್ ಕಟ್ಟಡ ಸ್ಥಳಾಂತರಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

         ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಎಂ.ಜೆ.ರಾಘವೇಂದ್ರ, ಶಿವಕುಮಾರ್, ಹೊಯ್ಸಳಗೋವಿಂದ, ನಗರಸಭೆಯ ಎಇಇ ವಿನಯ್, ಶಾಮಲಾ, ಜೆಇ ಲೋಕೇಶ್, ಕಂದಾಯಾಧಿಕಾರಿ ವಿ.ಈರಮ್ಮ, ಸಮನ್ವಯಾಧಿಕಾರಿ ಪಿ.ಪಾಲಯ್ಯ, ತಿಪ್ಪೇಸ್ವಾಮಿ, ಹರೀಶ್, ಬೋರಯ್ಯ ಮುಂತಾದವರು ಇದ್ದರು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಆಸ್ಪತ್ರೆಯ ಶುಶ್ರೂಷಕಿಯರು ಮನವಿಯನ್ನು ನೀಡಿ, ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುವಾಗ ಅಪರಿಚಿತ ವ್ಯಕ್ತಿಗಳು ಕುಡಿದು ಬಂದು ಗಲಾಟೆ ಮಾಡುತ್ತಿದ್ದು, ರೋಗಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ತೊಂದರೆಯಾಗುತ್ತಿದ್ದು, ಆಸ್ಪತ್ರೆ ಒಳ ಆವರಣದಲ್ಲಿ ಪೊಲೀಸ್ ಔಟ್ ಪೋಸ್ಟ್ ತೆರೆಯುವಂತೆ ಮನವಿ ಮಾಡಿದಾಗ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link