ತಿಪಟೂರು :
ಸಾಹಿತಿ ಕಲಾವಿದರು ಒಂದೆಡೆ ಸೇರಿ ಸಾಮಾಜಿಕ ಚಿಂತನೆಗಳನ್ನು ಸಾಂಸ್ಕøತಿಕವಾಗಿ ಚರ್ಚಿಸಿ ಶಾಂತಿ ಸಹಬಾಳ್ವೆಯೆಡೆಗೆ ಸಾಗುವಂತೆ ಸೃಜನಶೀಲ ಕಲಾಕೃತಿಗಳನ್ನು ಈ ಶಿಬಿರದಲ್ಲಿ ರಚಿಸುವಂತಾಗಲಿ ಎಂದು ತಿಪಟೂರು ತಾಲ್ಲೂಕು ಜೆ. ಮಲ್ಲೇನಹಳ್ಳಿಯ ನಿಸರ್ಗದಲ್ಲಿ ವರ್ಣೋದಯದ ಚಿತ್ರಕಲಾ ಶಿಬಿರವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರಾದ ಎಂ.ಬಿ. ಚನ್ನಬಸಪ್ಪನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂ.ಬಿ. ಚನ್ನಬಸಪ್ಪನವರ ಈ ನಿಸರ್ಗ ತಾಣವು ಬಸವಣ್ಣನವರ ಮಹಾಮನೆಯಂತಿದ್ದು ಇಲ್ಲಿ ಸೇರಿರುವ ಸಾಹಿತಿ, ಕಲಾವಿದರನ್ನು ನೋಡಿದರೆ ಅನುಭವ ಮಂಟಪದಂತೆ ಭಾಸವಾಗುತ್ತಿದೆ. ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಕಲಾಕೃತಿಗಳನ್ನು ರಚಿಸಲು ಸಾಧ್ಯವೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಡಿನ ಖ್ಯಾತ ಕಲಾವಿದ ಹಾಸನದ ಬಿ.ಎಸ್. ದೇಸಾಯಿ ತಿಳಿಸಿದರು. ಮತ್ತೊಬ್ಬ ಆಹ್ವಾನಿತರಾದ ಬೆಂಗಳೂರಿನ ಕಲಾವಿದರಾದ ಹೆಚ್.ಎಸ್. ವೇಣುಗೋಪಾಲ್ ಮಾತನಾಡುತ್ತಾ ಇಂತಹ ಕಲಾಶಿಬಿರಗಳು ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿದ್ದು ಶೈಕ್ಷಣಿಕ ಜಿಲ್ಲೆಯಷ್ಟೇ ಅಲ್ಲ ಸಾಂಸ್ಕøತಿಕ ಜಿಲ್ಲೆಯೂ ಆಗಿದೆಯೆಂದು ತಿಳಿಸಿದರು.
ಶಿಬಿರದ ನಿರ್ದೇಶಕರಾದ ಕಲಾವಿದ ಕಿಶೋರ್‍ಕುಮಾರ್‍ರವರು ಮಾತನಾಡುತ್ತಾ ಇಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅನೇಕ ಕಲಾವಿದರು ಇಲ್ಲಿ ಭಾಗವಹಿಸಿದ್ದು ವಿಭಿನ್ನ ಆಲೋಚನೆಯ ಸೃಜನಶೀಲ ಕಲಾಕೃತಿಗಳನ್ನು ರಚಿಸಲಿದ್ದಾರೆ. ಇದಕ್ಕೆ ನಿರಂತರ ಅಧ್ಯಯನ ಮತ್ತು ರಚನೆಗಳ ಮೂಲಕ ವರ್ಣೋದಯ ಆರ್ಟ್ ಗ್ರೂಪ್ ಅನೇಕ ಕಲಾಶಿಬಿರ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲೆಂದು ಆಶಿಸಿದರು.
ವೇದಿಕೆಯಲ್ಲಿ ಮಂಜುಳ ಚನ್ನಬಸಪ್ಪ ಹಾಗೂ ಸಾಹಿತ್ಯ ಉಪಸ್ಥಿತರಿದ್ದು ಈ ಶಿಬಿರದಲ್ಲಿ ಹಿರಿಯ ಕಲಾವಿದರಾದ ಕಿಶೋರ್‍ಕುಮಾರ್, ಬಿ.ಎಸ್.ದೇಸಾಯಿ, ಹೆಚ್.ಎಸ್.ವೇಣುಗೋಪಾಲ್, ಕೋಟೆಕುಮಾರ್, ಎಸ್.ಹೆಚ್.ನಾಗರಾಜು, ಎ.ಜಿ.ಉಮಾಮಹೇಶ್, ಹೆಚ್.ಎನ್.ಹರ್ಷ, ಕೆ.ಎಸ್.ಬಸವರಾಜು, ಜಿ.ಅರುಣ್, ರಾಜಣ್ಣ ಹಾಗೂ ಆರ್. ಭರತ್ ಭಾಗವಹಿಸಿದ್ದು ಈ ಚಿತ್ರಕಲಾ ಶಿಬಿರವು ಯಶಸ್ವಿಯಾಗಲೆಂದು ತುಮಕೂರಿನ ಕಲರ್ಸ್ ಗ್ರೂಪ್ (ರಿ) ಹಾಗೂ ಕಲ್ಚರಲ್ ವ್ಯಾಲಿ ಟ್ರಸ್ಟ್ (ರಿ) ಸಂಸ್ಥೆಗಳು ಶುಭ ಹಾರೈಸಿದ್ದು ಕಾರ್ಯಕ್ರಮಕ್ಕೆ ವರ್ಣೋದಯ ಆರ್ಟ್ ಗ್ರೂಪ್‍ನ ಕಾರ್ಯದರ್ಶಿ ಎ.ಜಿ.ಉಮಾಮಹೇಶ್ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ