ಮಧುಗಿರಿ :

ರಾಜ್ಯದ ಬಯಲುಸೀಮೆಯ ಆಶಾ ಕಿರಣವಾಗಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಯು ಯಾವುದೇ ಕಾರಣಕ್ಕೂ ಕುಂಠಿತವಾಗಲ್ಲ ಎಂದು ಆಂಧ್ರ ಪ್ರದೇಶದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಪಂಚಾಯತ್ ರಾಜ್ ಸಚಿವ ಪೆದ್ದರೆಡ್ಡಿ ರಾಮಚಂದ್ರರೆಡ್ಡಿ ತಿಳಿಸಿದರು.
ತಾಲ್ಲೂಕು ಗಡಿಭಾಗದ ಮಧುಗಿರಿ-ದಾಸರಹಳ್ಳಿಯ ಎತ್ತಿನಹೊಳೆ ಕಾರ್ಯಸ್ಥಾನಕ್ಕೆ ಬಂದಿದ್ದ ಆಂಧ್ರ್ರ ಸಚಿವರು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯನವರನ್ನು ಭೇಟಿ ಮಾಡಿ, ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿದರು. ಈ ಯೋಜನೆಯು ನಿಜಕ್ಕೂ ಬಯಲುಸೀಮೆಯ ರೈತರಿಗೆ ವರದಾನವಾಗಿದೆ. ಈ ಕಾಮಗಾರಿಯನ್ನು ಅವಧಿಯೊಳಗೆ ಪೂರ್ಣಗೊಳಿಸಲು ನಿಯಮದಂತೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಇದು ರೈತರ ಕೆಲಸವಾಗಿದ್ದು, ಎರಡೂ ರಾಜ್ಯದ ಭೂಮಿಯಲ್ಲಿ ಅಂತರ್ಜಲ ವೃದ್ಧಿಗೆ ಯೋಜನೆ ಸಹಕಾರಿಯಾಗಲಿದೆ. ಕಾಮಗಾರಿಯಲ್ಲಿ ಎಲ್ಲಿಯೂ ಯಾವುದೇ ಲೋಪ ಬಾರದಂತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಈ ಯೋಜನೆಗೆ ರಾಜ್ಯದ 3 ಪಕ್ಷಗಳ ಹಾಲಿ ಮಾಜಿ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹವಾಮಾನ ವೈ¥ರೀತ್ಯ ಹಾಗೂ ರೈತರಿಗೆ ನೀಡುವ ಪರಿಹಾರದ ಕಾರಣದಿಂದ ಮಾತ್ರ ಸ್ವಲ್ಪ ಹಿನ್ನಡೆಯಾಗಿದೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಸರಿಯಲ್ಲ. ಕ್ಷೇತ್ರದ ಸಹರದ್ದಿನ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡುವಂತೆ ಆಂಧ್ರ ಸಚಿವರ ಬಳಿ ಚರ್ಚಿಸಿದ್ದು, ಸಕಾರಾತ್ಮಕವಾಗಿ ಒಪ್ಪಿದ್ದಾರೆ. ಅವರೂ ರೈತ ಕುಟುಂಬದಿಂದ ಬಂದಿದ್ದು, ನಮ್ಮ ಎತ್ತಿನಹೊಳೆ ಯೋಜನೆಯನ್ನು ಅವಧಿಯೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಇದು ತಾಲ್ಲೂಕಿನ ರೈತರ ಪಾಲಿಗೆ ಹರ್ಷದಾಯಕ ವಿಚಾರ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕಂಭತ್ತನಹಳ್ಳಿ ರಘು, ಕಾಮಗಾರಿಯ ವ್ಯವಸ್ಥಾಪಕರು ಮತ್ತಿತರರು ಜೊತೆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








