ಮಧುಗಿರಿ :
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 20 ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವೆಂಕಟರಂಗಾರೆಡ್ಡಿ ನೇತೃತ್ವದ ಗುರುಮಿತ್ರ ಸಿಂಡಿಕೇಟ್‍ನ 14 ನಿರ್ದೇಶಕರುಗಳು ಆಯ್ಕೆಯಾಗುವ ಮೂಲಕ ಪ್ರಚಂಡ ಜಯಭೇರಿ ಬಾರಿಸಿದ್ದಾರೆ.
ವೆಂಕಟರಂಗಾರೆಡ್ಡಿ ಗುಂಪಿನಿಂದ ಸ್ಪರ್ಧಿಸಿದ್ದ 7 ಮಹಿಳಾ ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 13 ಶಿಕ್ಷಕರುಗಳಲ್ಲಿ 8 ಶಿಕ್ಷಕರು ಆಯ್ಕೆಯಾಗಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ತಿರಸ್ಕøತ ಮತಗಳಲ್ಲಿ ವೆಂಕಟರಂಗಾರೆಡ್ಡಿ ಗುಂಪಿಗೆ ಮತ ಚಲಾಯಿಸಿದ್ದು ಕಂಡು ಬಂದು ಈ ಮತಗಳೆಲ್ಲ ಸಿಂಧುವಾಗಿದ್ದರೆ, ಇನ್ನೂ ಹೆಚ್ಚಿನ ಸ್ಥಾನಗಳು ಗುರುಮಿತ್ರ ತಂಡಕ್ಕೆ ಒಲಿಯುತ್ತಿತ್ತು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯನವರ ಶಿಕ್ಷಕರ ಸ್ನೇಹ ಬಳಗದ ಸಿಂಡಿಕೇಟ್‍ನಲ್ಲಿ 6 ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ.
ಗೆಲುವಿಗೆ ಕಾರಣಗಳು :
ಗುರುಮಿತ್ರ ಸಿಂಡಿಕೇಟ್‍ನವರು ಕಳೆದ 5 ವರ್ಷಗಳಲ್ಲಿ ಮಾಡಿದ ಸಾಧನೆಗಳಲ್ಲಿ ಗುರುಭವನದ ಆವರಣದ ಸುತ್ತ 32 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಪ್ರತಿ ತಿಂಗಳು 71,500 ರೂ.ಗಳು ಬಾಡಿಗೆ ರೂಪದಲ್ಲಿ ಬರುವಂತೆ ಸಂಘಕ್ಕೆ ಆಸ್ತಿಯನ್ನು ಒದಗಿಸಿಕೊಟ್ಟಿದ್ದಾರೆ. ಪ್ರಶ್ನೆ ಪತ್ರಿಕೆಗಳ ನೀಲಿ ನಕ್ಷೆ, ಶಿಕ್ಷಕರ ವೇತನದ ಮಾಹಿತಿ, ಶಿಕ್ಷಕರಿಗೆ ಶೈಕ್ಷಣಿಕ ಪ್ರವಾಸ, ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ 3 ಸಾವಿರ ರೂ., ಗುರುಸ್ಪಂದನ ಕಾರ್ಯಕ್ರಮ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಗೊಬ್ಬ ಉತ್ತಮ ವಿದ್ಯಾರ್ಥಿಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು. ಮುಂದಿನ ಧ್ಯೇಯೋದ್ದೇಶಗಳಲ್ಲಿ 16 ಅಂಶಗಳನ್ನೊಳಗೊಂಡ ಮಾಹಿತಿ ಮತ್ತು ಪ್ರಚಾರದ ವೇಳೆ ಗುಂಪಿಗೆ ಮತ ನೀಡಿ ಎಂದು ಯಾಚಿಸಿದ್ದು ಗುರುಮಿತ್ರ ಸಿಂಡಿಕೇಟ್ ಗೆಲುವಿಗೆ ಕಾರಣವಾಗಿದೆ.
ಸೋಲಿಗೆ ಕಾರಣಗಳು :
ಶಿಕ್ಷಕರ ಸ್ನೇಹಬಳಗದ ಸಿಂಡಿಕೇಟ್‍ನಲ್ಲಿ ನಾಯಕತ್ವದ ಕೊರತೆ, ಸ್ಥಳೀಯ ಶಾಸಕ ಎಂ.ವಿ.ವೀರಭದ್ರಯ್ಯ ನವರ ಬಣವೆಂದು ಗುರುತಾಗಿದ್ದು, ಅತಿಯಾದ ಆತ್ಮವಿಶ್ವಾಸ, ಶಿಕ್ಷಕರ ವಿಶ್ವಾಸಾರ್ಹತೆ ದಿನೆ ದಿನೆ ಕಳೆದುಕೊಂಡಿದ್ದು, ಶಿಕ್ಷಕಿಯರ ಬೆಂಬಲವಿಲ್ಲದಂತಾಗಿದ್ದು, ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಸಂವಾದ ಮತ್ತು ಚರ್ಚಾ ಕಾರ್ಯಕ್ರಮದ ಫ್ಲ್ಲೆಕ್ಸ್‍ಗಳಲ್ಲಿ ಶಿಕ್ಷಕರ ಪ್ರತಿನಿಧಿಯಾಗಿದ್ದ ವೆಂಕಟರಂಗಾರೆಡ್ಡಿ ಮತ್ತು ಸಂಜಯ್‍ರವರ ಭಾವಚಿತ್ರಗಳನ್ನು ಸಂಘದ ಡಿ-ಗ್ರೂಪ್ ನೌಕರನ ಜೊತೆ ಹಾಕಿ ಶಿಕ್ಷಕ ಮತದಾರರನ್ನು ಅವಮಾನಿಸಿದ್ದು, ಮತಯಾಚನೆ ವೇಳೆ ಗುಂಪಿನ ಬದಲಾಗಿ ಅಭ್ಯರ್ಥಿಗಳು ವೈಯಕ್ತಿಕವಾಗಿ ಪ್ರಚಾರ ಕೈಗೊಂಡಿದ್ದು, ಪಕ್ಷೇತರರು ತೊಡರುಗಾಲು ನೀಡಿದ್ದು, ಜಾತಿ ಲೆಕ್ಕಾಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದು, ನಿವೃತ್ತಿ ಅಂಚಿನಲ್ಲಿರುವವರನ್ನು ಅಭ್ಯರ್ಥಿಗಳನ್ನಾಗಿಸಿದ್ದು, ಅಹಿಂದ ಮತಗಳು ಒಗ್ಗೂಡಿದ್ದು, ತದ್ವಿರುದ್ದವಾಗಿ ಒಕ್ಕಲಿಗ ಸಮುದಾಯದ ಮತಗಳು ವಿಭಜನೆಯಾಗಿದ್ದು ವಿ.ಹೆಚ್.ವೆಂಕಟೇಶಯ್ಯರವರ ಬಣ ಸೋಲಿಗೆ ಕಾರಣವಾಯಿತು.
ಅಧ್ಯಕ್ಷರಾದ ವೆಂಕಟರಂಗಾ ರೆಡ್ಡಿ ಪ್ರತಿಕ್ರಿಯಿಸಿ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರ ಸಹಕಾರ ಹಾಗೂ ನಮ್ಮ ತಂಡದ ಸದಸ್ಯರ ಒಗ್ಗಟ್ಟಿನ ಪ್ರದರ್ಶನ, ಸಾಮಾಜಿಕ ನ್ಯಾಯ, ಸಮೂಹಿಕ ನಾಯಕತ್ವದಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ನಾನು ಮತ್ತು ನಮ್ಮ ಸದಸ್ಯರು ಜಯಶೀಲರಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಹಳೆಯ ಗುರು ಭವನಕ್ಕೆ ಮರು ಜೀವ ನೀಡಲಾಗುವುದು. ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳ ವಿವರ :
(ಪುರುಷ ಅಭ್ಯರ್ಥಿಗಳು):
ವೆಂಕಟರಂಗಾರೆಡ್ಡಿ–589, ಸಂಜಯ್ – 573, ಆರ್.ಹೆಚ್.ಅಶ್ವ –497, ಎಸ್.ವಿ.ರಮೇಶ್– 475, ಎಸ್.ತೋಟದಪ್ಪ–46, ಹೆಚ್.ಆರ್.ಶಶಿಕುಮಾರ್-445, ವೈ.ಎ.ರಾಮದಾಸು-410, ಟಿ.ಡಿ.ನರಸಿಂಹಮೂರ್ತಿ-404, ಹೆಚ್.ಡಿ.ನರಸೇಗೌಡ–403, ಕೆ.ಚೌಡಪ್ಪ–384, ಬಿ.ಸಿ.ಕೆಂಪನರಸಪ್ಪ-380, ಎಸ್.ಎನ್.ಹನುಮಂತರಾಯಪ್ಪ-378 ಮತ್ತು ರಕೀಬ್‍ಸಾಬ್-371
(ಮಹಿಳಾ ಅಭ್ಯರ್ಥಿಗಳು): ಡಿ.ಹೇಮಲತ–528, ಎಂ.ಸಿ.ನಾಗಮ್ಮ-486, ಎಂ.ಲತಾಮಣಿ–478, ಎಂ.ಎಸ್.ಅನ್ನಪೂರ್ಣ-468, ಎ.ಎಸ್.ಲಕ್ಷ್ಮೀದೇವಮ್ಮ–432, ಟಿ.ಎಸ್.ಇಂದುಮತಿ-427 ಮತ್ತು ಸೌಭಾಗ್ಯಲಕ್ಷ್ಮೀ-427 ಮತಗಳನ್ನು ಗಳಿಸಿದ್ದಾರೆ. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ವಿ.ರಾಮಪ್ರಸಾದ್, ಸಹಾಯಕ ಚುನಾವಣಾಧಿಕಾರಿಗಳಾಗಿ ರಾಘವೇಂದ್ರ ಮತ್ತು ಮೋಹನ್‍ಕುಮಾರ್ ಕಾರ್ಯನಿರ್ವಹಿಸಿದರು.
