ಕೊರಟಗೆರೆ :-
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜೇನು ಕೃಷಿಯ ಮಧುವನದಲ್ಲಿ ಇಡಲಾಗಿದ್ದ ಹತ್ತು ಜೇನು ಪೆಟ್ಟಿಗೆಗಳನ್ನ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡಿರುವ ಘಟನೆ ಕೊರಟಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಕೊರಟಗೆರೆ ತಾಲೂಕಿನ ಕೂಲಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಕುಂಟೆ ಗ್ರಾಮದಲ್ಲಿ ಕಳೆದ 25 ವರ್ಷಗಳ ಹಿಂದೆ ಜೇನು ಕೃಷಿ ಉದ್ದೇಶಕ್ಕಾಗಿ ನಿರ್ಮಾಣಗೊಂಡಿರುವ ತೋಟಗಾರಿಕೆ ಇಲಾಖೆಯ ಮಧು ವನದಲ್ಲಿ ಇಡಲಾಗಿದ್ದ 10 ಜೇನುಪೆಟ್ಟಿಗೆಗಳನ್ನ ಯಾರು ಬೀಗ ಮುರಿದು ಪೆಟ್ಟಿಗೆಗಳನ್ನ ಕಳವು ಮಾಡಿದ್ದಾರೆ ಎನ್ನಲಾಗಿದೆ.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಕಳವಾಗಿರುವ ಆತಂಕ ವ್ಯಕ್ತಪಡಿಸಿ ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ದೂರು ದಾಖಲಿಸಲು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
