ಮಂಗಳೂರು: ಕರಾವಳಿ ಭಾಗದ ಜನರಿಗೆ ಸಿಹಿಸುದ್ದಿ ನೀಡಿದ ರೈಲ್ವೆ ಇಲಾಖೆ

ಮಂಗಳೂರು:

   ಕರ್ನಾಟಕದ ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಸುಮಾರು 12 ಎಕ್ಸ್ಪ್ರೆಸ್ ರೈಲುಗಳನ್ನು ಪ್ಯಾಸೆಂಜರ್ ರೈಲುಗಳಾಗಿ ಪರಿವರ್ತನೆ ಮಾಡಲಿದ್ದು, ಇದರಿಂದಾಗಿ ಪ್ರಯಾಣ ದರ ಇಳಿಕೆಯಾಗಲಿದೆ. ಜುಲೈ 1 ರಿಂದ ಈ ಆದೇಶ ಜಾರಿಗೆ ಬರಲಿದೆ.

   ಮಂಗಳೂರು ರೈಲ್ವೆ ವಿಭಾಗದಲ್ಲಿ ಸಂಚಾರ ನಡೆಸುತ್ತಿರುವ 12 ಎಕ್ಸ್ಪ್ರೆಸ್ ರೈಲುಗಳನ್ನು ಪ್ಯಾಸೆಂಜರ್ ರೈಲುಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಕೋವಿಡ್ ಪರಿಸ್ಥಿತಿಗಿಂತ ಮೊದಲು ಇದ್ದ ಮಾದರಿಯಲ್ಲಿ ಪ್ಯಾಸೆಂಜರ್ ರೈಲುಗಳಾಗಿ ಈ ರೈಲುಗಳು ಸಂಚಾರ ನಡೆಸಲಿವೆ. 

   ದಕ್ಷಿಣ ರೈಲ್ವೆಯು ನೀಡಿದ ಮಾಹಿತಿಯ ಪ್ರಕಾರ ‘0’ ಇಂದ ಆರಂಭವಾಗುವ ಎಲ್ಲಾ ರೈಲುಗಳ ನಂಬರ್ಗಳನ್ನು ಬದಲಾವಣೆ ಮಾಡಲಿದ್ದು, ಅವುಗಳ ಸಂಖ್ಯೆ ಪ್ಯಾಸೆಂಜರ್ ರೈಲುಗಳ ಸಂಖ್ಯೆ ಮಾದರಿಯಲ್ಲಿ 5, 6 ಅಥವ 7ರಿಂದ ಆರಂಭವಾಗಲಿವೆ.

    ರೈಲ್ವೆ ಇಲಾಖೆ ಈ ವರ್ಷದ ಫೆಬ್ರವರಿಯಲ್ಲಿ ಪ್ಯಾಸೆಂಜರ್ ರೈಲುಗಳ ದರಗಳನ್ನು ಪುನಃ ಜಾರಿಗೊಳಿಸಿತ್ತು. ಕೋವಿಡ್ ಪೂರ್ವದಲ್ಲಿ ಸಂಚಾರ ನಡೆಸುತ್ತಿದ್ದ ಹಲವು ರೈಲುಗಳನ್ನು ಎಕ್ಸ್ಪ್ರೆಸ್ ಆಗಿ ಪರಿವರ್ತಿಸಲಾಗಿತ್ತು. ಇದರಿಂದಾಗಿ ದರಗಳು ಹೆಚ್ಚಾಗಿದ್ದವು. 

   ಈಗ ಎಕ್ಸ್ಪ್ರೆಸ್ ರೈಲುಗಳನ್ನು ಪ್ಯಾಸೆಂಜರ್ ರೈಲುಗಳಾಗಿ ಪರಿವರ್ತನೆ ಮಾಡಿ, ನಂಬರ್ ಬದಲಾವಣೆ ಮಾಡಿದರೆ ಕೋವಿಡ್ ಪೂರ್ವದಲ್ಲಿ ಇದ್ದ ಪ್ರಯಾಣ ದರ ಮತ್ತೆ ಜಾರಿಗೆ ಬರಲಿದೆ. ಆಗ 25 ರಿಂದ 105 ರೂ.ಗಳ ದರದಲ್ಲಿ ಜನರು ರೈಲಿನಲ್ಲಿ ಸಂಚಾರ ನಡೆಸಬಹುದು.

   ರೈಲು ನಂಬರ್ 06485/ 06484 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ರೈಲು ನಂಬರ್ 56625/ 56626 ಆಗಿ ಬದಲಾವಣೆಯಾಗಲಿದೆ.

   ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ನಂಬರ್ 06487/ 06486 ಜುಲೈ 1ರಿಂದ 56627/ 56628 ಆಗಿ ಬದಲಾಗಲಿದೆ.

   ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್-ಮಂಗಳೂರು ಸೆಂಟ್ರಲ್ ನಡುವಿನ ಎಕ್ಸ್ಪ್ರೆಸ್ ರೈಲು ರೈಲು ನಂಬರ್ 06489/ 06488 ಇನ್ನು ಮುಂದೆ ರೈಲು ನಂಬರ್ 56629/ 56630 ಆಗಿ ಬದಲಾಗಲಿದೆ.

   ಕಣ್ಣೂರು-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ನಂಬರ್ 06477 ಇನ್ನು ಮುಂದೆ ರೈಲು ನಂಬರ್ 56717 ಆಗಿ ಮತ್ತು ಮಂಗಳೂರು ಸೆಂಟ್ರಲ್-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ರೈಲು 06478 ಇನ್ನು ಮುಂದೆ 56718 ಆಗಿ ಪರಿವರ್ತನೆಗೊಳ್ಳಲಿದೆ.

   ಚರ್ವತ್ತೂರು-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ನಂಬರ್ 06491 ಜುಲೈ 1ರಿಂದ ರೈಲು ನಂಬರ್ 56621 ಆಗಿ ಸಂಚಾರ ನಡೆಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

   ರೈಲು ನಂಬರ್ 06478 ಮಂಗಳೂರು ಸೆಂಟ್ರಲ್-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ರೈಲನ್ನು ರೈಲು ನಂಬರ್ 56728 ಆಗಿ ಜುಲೈ 1ರಿಂದ ಪರಿವರ್ತನೆ ಮಾಡಲಾಗುತ್ತದೆ.ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು 06601/ 06602 ಇನ್ನು ಮುಂದೆ ರೈಲು ನಂಬರ್ 56615/ 56616 ಆಗಿ ಪರಿವರ್ತನೆಯಾಗಲಿದೆ.
   ಪ್ರಯಾಣಿಕರು ಕೋವಿಡ್ ಪರಿಸ್ಥಿತಿ ಬಳಿಕ ಪ್ಯಾಸೆಂಜರ್ ರೈಲುಗಳ ಮಾದರಿಯಲ್ಲಿಯೆ ರೈಲುಗಳನ್ನು ಓಡಿಸಬೇಕು. ಆಗ ದರವೂ ಕಡಿಮೆಯಾಗಲಿದೆ. ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಈಗ ಮನ್ನಣೆ ನೀಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap