ಮಾಸ್ಟರ್ ಆನಂದ್ ಪುತ್ರಿ ವಂಶಿಕಾಗೆ ನಮ್ಮಮ್ಮ ಸೂಪರ್ ಸ್ಟಾರ್ ಪ್ರಶಸ್ತಿ!!

ಬೆಂಗಳೂರು: 

ಖ್ಯಾತ ಕಿರುತೆರೆ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ತೆರೆ ಬಿದ್ದಿದ್ದು, ಖ್ಯಾತ ನಟ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹಾಗೂ ಪತ್ನಿ ಯಶಸ್ವಿನಿ ವಿಜೇತರಾಗಿದ್ದಾರೆ.

‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾದ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ವಂಶಿಕಾ ಹಾಗೂ ಯಶಸ್ವಿನಿ ವಿಜೇತರಾಗಿದ್ದಾರೆ.

ಭಾನುವಾರ (ಏ.3) ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದ ವಿನ್ನರ್​ ಹೆಸರನ್ನು ಘೋಷಿಸಲಾಗಿದ್ದು, ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ ಜೋಡಿ ಈ ಟ್ರೋಫಿ ಗೆದ್ದಿದ್ದಾರೆ.

ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್: ಏ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ 35 ಪೈಸೆ ದರ ಹೆಚ್ಚಳ

ಕಿರುತೆರೆ ಪ್ರೇಕ್ಷಕರಿಗೆ ‘ನನ್ನಮ್ಮ ಸೂಪರ್​ ಸೂಪರ್​ ಸ್ಟಾರ್​’ ಕಾರ್ಯಕ್ರಮದ ಸ್ಪರ್ಧಿಗಳು ಹಲವು ತಿಂಗಳ ಕಾಲ ಮನರಂಜನೆ ನೀಡಿದರು. ವಿದ್ಯಾ-ರೋಹಿತ್​, ಸುಪ್ರಿತಾ-ಇಬ್ಬನಿ, ಜಾನ್ವಿ-ಗ್ರಂಥ್​, ಪುನೀತಾ-ಆರ್ಯ, ಯಶಸ್ವಿನಿ-ವಂಶಿಕಾ, ನಂದಿನಿ-ಅದ್ವಿಕ್​ ಅವರು ಫಿನಾಲೆ ತಲುಪಿದ್ದರು. ಭಾನುವಾರ ಸಂಜೆ ನಡೆದ ಫಿನಾಲೆಯಲ್ಲಿ ವಿನ್ನರ್​ ಯಾರು ಎಂಬುದನ್ನು ನಟಿ ತಾರಾ ಅನುರಾಧ ಅವರು ಘೋಷಿಸಿದರು. ವಂಶಿಕಾ ಮತ್ತು ಯಶಸ್ವಿನಿ ಅವರು ಟ್ರೋಫಿ ಎತ್ತಿ ಹಿಡಿದಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

5 ಲಕ್ಷ ರೂ ಬಹುಮಾನಇನ್ನು ಶೋ ಗೆದ್ದ ತಾಯಿ ಮಗಳ ಜೋಡಿಗೆ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಸಿಕ್ಕಿದೆ. ಮಗುವನ್ನು ತಾಯಿ ಎತ್ತಿಕೊಂಡಿರುವ ರೀತಿಯಲ್ಲಿ ಟ್ರೋಫಿ ವಿನ್ಯಾಸಗೊಂಡಿದೆ. ಅದೇ ಮಾದರಿಯಲ್ಲಿ ಯಶಸ್ವಿನಿ ಮತ್ತು ವಂಶಿಕಾ ಕೂಡ ಪೋಸ್​ ನೀಡಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap