ಕೊರಟಗೆರೆ
ಸಾರ್ವಜನಿಕರಿಗೆ ಹಾಗೂ ಅಕ್ಕಿ ಪಕ್ಷಿಗಳಿಗೆ ನೂರಾರು ವರ್ಷಗಳಿಂದ ಜೀವ ಮೂಲವಾದಂತ ಸರ್ಕಾರಿ ರಾಜಗಾಲ್ವೆ ಹಾಗೂ ಎಂತಹ ಬರಗಾಲದಲ್ಲೂ ಬೇಸಿಗೆ ಕಾಲದಲ್ಲೂ ನೀರು ಹಿಂಗದ ಗೋಕಟ್ಟೆಯನ್ನ ಖಾಸಗಿ ಬಂಡವಾಳ ಶಾಹಿ ಬಳ್ಳಾರಿ ಮೂಲದ ವ್ಯಕ್ತಿ ಓರ್ವ ತನ್ನ ಜಮೀನಿನ ರಸ್ತೆಗಾಗಿ ಮುಚ್ಚಿ ರಸ್ತೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ನೂರಾರು ಜನ ಸಾರ್ವಜನಿಕರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ನೀಲಗುಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಗುಂಡನಹಳ್ಳಿ ಸರ್ವೆ ನಂಬರ್ 56 ನೀಲುಗೊಂಡನಹಳ್ಳಿ ಹಾಗೂ ಚಿಕ್ಕ ಪಾಲನ ಹಳ್ಳಿ ಮಧ್ಯಭಾಗದಲ್ಲಿ ಇರುವಂತಹ ಸರ್ಕಾರಿ ರಾಜಗಾಲ್ವೆ ಹಾಗೂ ಗೋಕಟ್ಟೆ , ಚೆಕ್ ಡ್ಯಾಮ್ ಗಳನ್ನ ಬಳ್ಳಾರಿ ಮೂಲದ ಸೊಂಡೂರಿನ ರುದ್ರೇಗೌಡನ ಮಗ ಕುಮಾರಸ್ವಾಮಿ ಎಂಬ ವ್ಯಕ್ತಿ ಮುಚ್ಚಿ ತನ್ನ ಜಮೀನಿಗೆ ರಸ್ತೆ ಮಾಡಿಕೊಳ್ಳುತಿರುವುದರ ವಿರುದ್ಧವಾಗಿ ನೂರಾರು ಸಾರ್ವಜನಿಕರು ಕಾಮಗಾರಿಯನ್ನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಗಾಲುವೆ ಹಾಗೂ ಗೋಕತೆ ಕಳೆದ ನೂರಾರು ವರ್ಷಗಳಿಂದ ಜನರಿಗೆ ಹಾಗೂ ಜನಜಾನುವಾರುಗಳಿಗೆ , ಅಕ್ಕಿ ಪಕ್ಷಿಗಳಿಗೆ ಜೀವ ಚರ ಜಲಮೂಲವಾಗಿದ್ದಂತ ರಾಜಗಾಲುವೆ ಹಾಗೂ ಗೋಗಟ್ಟಿಯನ್ನ ಖಾಸಗಿ ವ್ಯಕ್ತಿ ಓರ್ವ ತನ್ನ ಜಮೀನಿಗೆ ರಸ್ತೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ 20 ರಿಂದ 25 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಮ್ಗಳನ್ನ ಅದು ಈ ಹಿಂದೆ ಬರಗಾಲದ ಸಂದರ್ಭದಲ್ಲಿ ಜನರಿಗೆ ಅಕ್ಕಿ ಒದಗಿಸಬೇಕೆಂಬ ಕೂಲಿಗಾಗಿ ಕಾಡು ಯೋಜನೆ ಅಡಿಯಲ್ಲಿ ಕಾಮಗಾರಿ ನಡೆದಂತಹ ಎಂತಹ ಬರಗಾಲದಲ್ಲೂ ಹಕ್ಕಿ ಪಕ್ಷಿಗಳು ಹಾಗೂ ಜನಜಾನುವಾರುಗಳಿಗೆ ನೀರು ಹಿಂಗದ ಗೊಕಟ್ಟಿಯನ್ನ ಮುಚ್ಚಿ ರಸ್ತೆ ಮಾಡುತ್ತಿರುವುದರ ವಿರುದ್ಧ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗಣಿಗಾರಿಕೆಯ ಕರಿ ನೆರಳು
ಬಳ್ಳಾರಿ ಮೂಲದ ಸಂಡೂರಿನ ಕುಮಾರಸ್ವಾಮಿ ಸನ್ ಆಫ್ ರುದ್ರೇಗೌಡ ಎಂಬುವರಿಗೆ ನೀಲಗುಂನಳ್ಳಿ ಸರ್ವೆ ನಂಬರ್ 57ರಲ್ಲಿ 12 ಎಕ್ರೆ ಜಮೀನನ್ನ ಕಲ್ಲಿನ ಗಣಿಗಾರಿಕೆಗಾಗಿ ಸರ್ಕಾರ ಮಂಜೂರು ಮಾಡಲಾಗಿದ್ದು, ಇತ್ತೀಚೆಗೆ ಕೆಲವಾರು ವರ್ಷಗಳಿಂದ ಕಾಮಗಾರಿ ಪ್ರಾರಂಭಗೊಳ್ಳದ ಕಾರಣ ಕಲ್ಲಿನ ಗಣಿಗಾರಿಕೆ ಲೈಸನ್ಸ್ ರದ್ದುಗೊಳಿಸಿದರಾದರೂ ಮತ್ತೆ ಸರ್ಕಾರ ಮಟ್ಟದಲ್ಲಿ ಮತ್ತೆ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿರುವ ಗಣಿ ಮಾಲೀಕ 30 ಗುಂಟೆ ಎಷ್ಟು ಜಾಗ ಸರ್ಕಾರಿ ಕರಾಬು ಇದ್ದ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾಗಿದ್ದು ಈ ಜಾಗಕ್ಕೆ ಹೊಂದಿಕೊಂಡಂತಿದ್ದ ರಾಜಗಲ್ವೆ, ಗೋಕಟ್ಟೆ ಹಾಗೂ ಚೆಕ್ ಡ್ಯಾಮ್ ಗಳನ್ನ ಅಕ್ರಮವಾಗಿ ಮುಚ್ಚಿ ರಸ್ತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ವಿರುದ್ಧ ನೂರಾರು ಜನ ಸ್ಥಳೀಯ ಸಾರ್ವಜನಿಕರು ಕಾಮಗಾರಿ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಕಲ್ಲಿನ ಗಣಿಗಾರಿಕೆಗೆ ಮುಂದಾದ ಗಣಿ ಮಾಲೀಕ
ಕೊರಟಗೆರೆ ತಾಲೂಕಿನಲ್ಲಿ ನಾಲ್ಕು ಕಡೆ ನೂರಾರು ಎಕರೆ ಕಲ್ಲಿನ ಗಣಿಗಾರಿಕೆಗೆ ಅತ್ಯಾಧುನಿಕ ಯಂತ್ರೋಪಕರಣಗಳಿಂದ ಗಣಿಗಾರಿಕೆ ನಡೆಸಲು ಬಳ್ಳಾರಿಯ ಸಂಡೂರಿನ ಗಣಿ ಧಣಿಗಳಾದ ರುದ್ರೆಗೌಡ ,ನಾಗೇಗೌಡ, ಕುಮಾರಸ್ವಾಮಿ ಎಂಬುವ ಒಂದೇ ಕುಟುಂಬದ ಸದಸ್ಯರಿಗೆ ನೂರಾರು ಎಕರೆ ಗಣಿಗಾರಿಕೆಗೆ ಸರ್ಕಾರದಿಂದ ಅನುಮತಿ ಪಡೆದಿದ್ದು ಅದರ ಪ್ರಾರಂಭಕ್ಕೆ ಸತತ 4-5 ವರ್ಷಗಳಿಂದ ಪ್ರಯತ್ನಪಡುತ್ತಿದ್ದು, ಅದರ ಮೊದಲ ಭಾಗವಾಗಿ ಇಂದು ನೀಲಗೊಂಡನಹಳ್ಳಿ ಸರ್ವೆ ನಂಬರ್ 57ರ 12 ಎಕರೆ ಜಮೀನಿಗೆ ರಸ್ತೆ ಸಂಪರ್ಕವನ್ನ ಸುಗಮಗೊಳಿಸಲು ಸರ್ಕಾರಿ ರಾಜಗಾಲುವೆ ,ಗೋಕಟ್ಟೆ ಹಾಗೂ ಚೆಕ್ ಡ್ಯಾಮ್ಗಳನ್ನ ಅಕ್ರಮವಾಗಿ ಮುಚ್ಚಿ ರಸ್ತೆ ಮಾಡಿಕೊಳ್ಳುತ್ತಿರುವ ಬಂಡವಾಳ ಶಾಹಿ ವ್ಯಕ್ತಿಯ ವಿರುದ್ಧ ಸ್ಥಳೀಯ ಹತ್ತಾರು ಗ್ರಾಮದ ನೂರಾರು ಜನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲಿನ ಗಣಿಗಾರಿಕೆಗೆ ಸಾರ್ವಜನಿಕರ ವಿರೋಧ
ಕೊರಟಗೆರೆ ತಾಲೂಕಿನ ಮೇಲೆ ಬಳ್ಳಾರಿ ಸಂಡೂರಿನ ಗಣಿ ಧಣಿಗಳ ಕೆಂಗಣ್ಣು ಬೀರಿದ್ದು, ನೂರಾರು ಎಕ್ರೆ ಜಮೀನಿನಲ್ಲಿ ಕಲ್ಲಿನ ಗಣಿಗಾರಿಕೆ ನಡೆಸಲು ಸರ್ಕಾರದಿಂದ ಜಮೀನುಗಳನ್ನು ಮಂಜೂರು ಮಾಡಿಕೊಳ್ಳಲಾಗಿದ್ದು, ಕೊರಟಗೆರೆ ತಾಲೂಕು ಕೊಳಲ ಹೋಬಳಿ 57ರಲ್ಲಿ 12 ಎಕರೆ 20 ಕುಂಟೆ ಕುಮಾರಸ್ವಾಮಿ ತಂಗನಹಳ್ಳಿ ಸರ್ವೆ ನಂಬರ್ 32 ರಲ್ಲಿ 22, 20 ಎಕ್ರೆ ನಾಗನಗೌಡ ಎಂಬುವರಿಗೆ ಸಿದ್ದಾಪುರ ಗ್ರಾಮದ ಸರ್ವೆ ನಂಬರ್ 4ರಲ್ಲಿ 14 ಪಾಯಿಂಟ್ 20 ಎಕರೆ ರುದ್ರೇಗೌಡ ಎಂಬವರಿಗೆ ಹೆಣ್ಣೂರು ತಿಮ್ಮನಹಳ್ಳಿ ಸರ್ವೆ ನಂಬರ್ ನಾಲ್ಕರಲ್ಲಿ 19 ಎಕರೆ 20 ಗುಂಟೆ, ನೀಲಗುಂನಳ್ಳಿ ಸರ್ವೆ ನಂಬರ್ 57 ರಲ್ಲಿ 12 ಎಕರೆ 20 ಕುಂಟೆ ರುದ್ರೇಗೌಡ ಎಂಬುವರಿಗೆ ಮಂಜೂರು ಮಾಡಲಾಗಿದ್ದು ಈ ಎಲ್ಲಾ ಜಮೀನುಗಳ ಗಣಿಗಾರಿಕೆಗೆ ಗಣಿ ಧಣಿಗಳು ಸತತ ಪ್ರಯತ್ನ ನಡೆಸುತ್ತಿದ್ದು, ಸಾರ್ವಜನಿಕರು ರಕ್ತ ಹರಿಸಿದರೂ ಚಿಂತೆ ಇಲ್ಲ ಗಣಿಗಾರಿಕೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಅಕ್ಕ ಪಕ್ಕದ ನೂರಾರು ಗ್ರಾಮದ ಸಾವಿರಾರು ಜನ ಗ್ರಾಮಸ್ಥರು ಗಣಿಗಾರಿಕೆ ವಿರುದ್ಧ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ದೊಡ್ಡ ಮಟ್ಟದ ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಭೂ ರಹಿತರನ್ನ ಒಕ್ಕಲಿಬ್ಬಿಸುವ ಕುತಂತ್ರ
ಬಳ್ಳಾರಿ ಗಣಿ ಧಣಿಗಳು ತಮ್ಮ ಪ್ರಭಾವವನ್ನ ಬಿರಿ ಸರ್ಕಾರದ ಮಟ್ಟದಲ್ಲಿ ಕಲ್ಲಿನ ಗಣಿಗಾರಿಕೆಗೆ ಅನುಕೂಲಕರ ಆಗುವ ರೀತಿಯಲ್ಲಿ
ಕೆ ಐ ಎ ಡಿ ಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಮೂಲಕ ರೈತರ ಜಮೀನು ವಶ ಪಡಿಸಿಕೊಂಡು ಗಣಿಗಾರಿಕೆಗೆ ಅನುಕೂಲ ಕಲ್ಪಿಸಲಾಗುತ್ತಿದೆ, ಆದರೆ ದುರಾದೃಷ್ಟ ಎಂಬಂತೆ ಭೂ ರಹಿತ ರೈತರ ಜಮೀನುಗಳೆ ಬಹಳಷ್ಟು ಗಣಿಗಾರಿಕೆಗೆ ವಶಪಡಿಸಿಕೊಳ್ಳಲಾಗಿದ್ದು, ದಿಕ್ಕು ಕಾಣದ ರೈತಾಪಿ ವರ್ಗ ಸರ್ಕಾರದ ಮೊರೆ ಹೋಗಿ ಕೋರ್ಟ್ ಮೆಟ್ಟಿಲೇರುವ ಅದರ ಜೊತೆಗೆ ಈಗ ಹೋರಾಟದ ಆದಿ ತುಳಿದಿದ್ದಾರೆ.
ನೀಲ್ಗೊಂಡನಹಳ್ಳಿ ಸರ್ವೆ ನಂಬರ್ 57ರಲ್ಲಿ 12 ಎಕರೆ 20 ಕುಂಟೆ ಜಮೀನು ಕಲ್ಲಿನ ಸಗಣಿಗಾರಿಕೆಗಾಗಿ ಬಳ್ಳಾರಿ ಮೂಲದ ಸಂಡೂರಿನ ಕುಮಾರಸ್ವಾಮಿ ತಂದೆ ರುದ್ರಗೌಡ ಎಂಬುವರಿಗೆ ಮಂಜೂರಾಗಿದ್ದು , ಈ ಗಣಿಗಾರಿಕೆಗೆ ಅನುಕೂಲಕರ ಆಗುವ ರೀತಿಯಲ್ಲಿ ಸರ್ಕಾರಿ ರಾಜುಗಾಲ್ವೆ ಗೋಕಟ್ಟೆ ಹಾಗೂ ಚೆಕ್ ಡ್ಯಾಮ್ಗಳನ್ನ ಮುಚ್ಚಿ ಅಕ್ರಮ ವಾಗಿ ರಸ್ತೆ ಮಾಡಿಕೊಳ್ಳಲು ಮುಂದಾಗಿದ್ದಾರೆ , ಸರ್ಕಾರದ ರಾಜಗಾಲ್ವೆ ಗೋಕಟ್ಟೆ ಮುಚ್ಚಲು ಇವರಿಗೆ ಯಾರು ಅನುಮತಿ ಕೊಟ್ಟಿದ್ದಾರೆ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ, ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರತಿಕ್ಷಣ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಈಶ್ವರ್ …ಸಮಾಜಸೇವಕರು ಚಿಕ್ಕಪಾಲನಹಳ್ಳಿ…
ಬಳ್ಳಾರಿ ಗಣಿ ಧಣಿಗಳ ವಕ್ರದೃಷ್ಟಿ ಕೋರ್ಟ್ ಗೇರಿಗೆ ಬಿರಿದೆ, ಅವರ ಗಣಿಗಾರಿಕೆಗೋಸ್ಕರ ಸಾವಿರಾರು ವರ್ಷಗಳ ಸರ್ಕಾರಿ ರಾಜಕಾಲುವೆ, ಗೋಕಟ್ಟೆ ಹಾಗೂ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಮ್ ಮುಚ್ಚಿ ರಸ್ತೆ ಮಾಡಿಕೊಳ್ಳುತ್ತಿದ್ದು, ಗಣಿಗಾರಿಕೆ ನಡೆಸುವ ಸ್ಥಳಕ್ಕೆ ರಸ್ತೆ ಮಾಡಿಕೊಳ್ಳುತ್ತಿರುವ ಈ ಗಡಿ ಮಾಲೀಕನ ವಿರುದ್ಧ ಕಂದಾಯ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕು.
ಕೃಷ್ಣಮೂರ್ತಿ …ಗ್ರಾಮ ಪಂಚಾಯತಿ ಸದಸ್ಯರು ನೀಲ್ಗೊಂಡನಹಳ್ಳಿ.
ಬಳ್ಳಾರಿ ಮೂಲದ ಸಂಡೂರಿನ ಗಣಿ ಧಣಿಗಳು ಕೊರಟಗೆರೆ ಭಾಗದ ಐದಾರು ಕಡೆ ಗಣಿಗಾರಿಕೆ ನಡೆಸಲು ಸರ್ಕಾರದಿಂದ ಅನುಮತಿ ಪಡೆದು ಗಣಿಗಾರಿಕೆಗೆ ಪ್ರಯತ್ನ ಪಡುತ್ತಿದ್ದಾರೆ, ಆದರೆ ಈ ಗಣಿಗಾರಿಕೆಗೆ ಬಹಳಷ್ಟು ತಾಂತ್ರಿಕ ದೋಷಗಳಿದ್ದು, ಬಹಳಷ್ಟು ಗಣಿಗಾರಿಕೆ ಅನುಮತಿಯನ್ನು ರದ್ದುಗೊಳಿಸಲಾಗಿದ್ದು ಆದರೂ ಗಣಿ ಧಣಿಗಳು ಕೊಟ್ಟುಬಿಡದೆ ಈ ಭಾಗದಲ್ಲಿ ಗಣಿಗಾರಿಕೆ ನಡೆಸಲು ಸತತ ಪ್ರಯತ್ನ ಪಡುತ್ತಿದ್ದಾರೆ ಇದಕ್ಕೆ ಸಾವಿರಾರು ರೈತರ ಸಾರ್ವಜನಿಕರ ವಿರೋಧವಿದೆ, ಎಂಥಾ ಸಂದರ್ಭ ಬಂದರೂ ಗಣಿಗಾರಿಕೆಗೆ ಅವಕಾಶ ಕಲ್ಪಿಸುವುದಿಲ್ಲ.-ಸಿದ್ದರಾಜು. ವಕೀಲರು ನೀಲಗೊಂಡನಹಳ್ಳಿ
