ನವದೆಹಲಿ:
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ವಿದೇಶಿ ಪ್ರವಾಸ ಗಳ ಕುರಿತು ಹಿಂದಿನಿಂದಲೂ ಟೀಕೆ ಮಾಡುತ್ತಾ ಬರುತ್ತಿವೆ. “ಪದೇ ಪದೇ ವಿದೇಶಗಳಿಗೆ ಭೇಟಿ ನೀಡುವ ಪ್ರಧಾನಿ, ಸ್ವದೇಶದ ಮಣಿಪುರಕ್ಕೆ ಭೇಟಿ ನೀಡುತಿಲ್ಲ” ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ. ಹೀಗಾಗಿ, ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸ ದ ಕುರಿತು ಕೇಂದ್ರ ಸರ್ಕಾರ ದಿಂದ ಮಾಹಿತಿಯನ್ನು ಕೇಳಲಾಗುತ್ತದೆ. ಈ ಬಾರಿಯ ಬಜೆಟ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮೇ 2022ರಿಂದ ಡಿಸೆಂಬರ್ 2024ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ 38 ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಸುಮಾರು 258 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಇದರಲ್ಲಿ ವಸತಿ, ಸಾರಿಗೆ, ಭದ್ರತೆ, ಸಮುದಾಯದ ಸ್ವಾಗತ, ಮಾಧ್ಯಮ ನಿಯೋಗಗಳ ವೆಚ್ಚ ಹಾಗೂ ಇತರೆ ವೆಚ್ಚಗಳ ವಿವರವೂ ಸೇರಿದೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಉತ್ತರ ನೀಡಿದ್ದಾರೆ.
ಜೂನ್ 2023ರಲ್ಲಿ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸವು ಅತ್ಯಂತ ದುಬಾರಿ ಭೇಟಿಗಳಲ್ಲಿ ಒಂದಾಗಿದ್ದು, ಇದಕ್ಕಾಗಿ 22.89 ಕೋಟಿ ರೂ. ವೆಚ್ಚ ತಗುಲಿತ್ತು. ನಂತರ ಸೆಪ್ಟೆಂಬರ್ 2024ರಲ್ಲಿ ಕೈಗ ಅವರು ಕೈಗೊಂಡ 38 ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಸುಮಾರು 258 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದರಲ್ಲಿ ವಸತಿ, ಸಾರಿಗೆ, ಭದ್ರತೆ, ಸಮುದಾಯದ ಸ್ವಾಗತ, ಮಾಧ್ಯಮ ನಿಯೋಗಗಳ ವೆಚ್ಚ ಹಾಗೂ ಇತರೆ ವೆಚ್ಚಗಳ ವಿವರವೂ ಸೇರಿದೆ.ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಉತ್ತರ ನೀಡಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಅಮೆರಿಕ ಭೇಟಿಗಳು ಅತ್ಯಂತ ದುಬಾರಿಯಾಗಿದ್ದವು. ಜೂನ್ 2023ರ ಪ್ರವಾಸವು ರೂ. 22 ಕೋಟಿಯನ್ನು ಮೀರಿದ್ದು, ಇದು ಅತ್ಯಧಿಕ ವೆಚ್ಚವಾಗಿದೆ. ಅಂತರರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸಲು ಈ ಖರ್ಚುಗಳಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮೇ 2022ರಲ್ಲಿ ಪ್ರಧಾನಿಯವರ ನೇಪಾಳ ಭೇಟಿಯು ರೂ. 80 ಲಕ್ಷ ವೆಚ್ಚದಲ್ಲಿ ಮುಕ್ತಾಯಗೊಂಡಿತ್ತು, 2024ರ ಉಕ್ರೇನ್ ಪ್ರವಾಸಕ್ಕೆ ರೂ. 2.52 ಕೋಟಿ ವೆಚ್ಚವಾಗಿತ್ತು. ಇವೆರಡೂ ಪ್ರಧಾನಿಯವರ ಅತ್ಯಂತ ಕಡಿಮೆ ವೆಚ್ಚದ ಪ್ರವಾಸಗಳಾಗಿವೆ.
