ನವದೆಹಲಿ :
ಇಡೀ ಜಗತ್ತಿಗೆ ಭಾರತ ಭರವಸೆಗಳ ಪುಷ್ಪಗುಚ್ಛ ನೀಡಿದ್ದು, ದೇಶದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು.
ಭಾರತ ಸದ್ಯ ಕೋವಿಡ್ನ ಮೂರನೇ ಅಲೆ ಎದುರಿಸುತ್ತಿದೆ. ಈ ಸಮಯವನ್ನು ಆರ್ಥಿಕ ಸುಧಾರಣೆಗೋಸ್ಕರ ನಾವು ಬಳಕೆ ಮಾಡಿಕೊಂಡಿದ್ದೇವೆ. ಈ ದೇಶವು ವಿಶ್ವಕ್ಕೆ ಭರವಸೆಯ ಪುಷ್ಪಗುಚ್ಛ ನೀಡಿದ್ದು, ಅದರಲ್ಲಿ ನಮಗೆ ಅಚಲವಾದ ನಂಬಿಕೆ ಇದೆ.
ಭಾರತ ಸರಿಯಾದ ದಿಕ್ಕಿನಲ್ಲಿ ಸುಧಾರಣೆಗಳತ್ತ ಸಾಗಿದ್ದು, ಜಾಗತಿಕ ಆರ್ಥಿಕ ತಜ್ಞರು ಕೂಡ ನಮ್ಮ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ವಿಶ್ವದ ಅನೇಕ ಆಸೆ-ಆಕಾಂಕ್ಷೆಗಳನ್ನು ನಾವು ಪೂರೈಸುತ್ತಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
