ಮುಡಾ ಹಗರಣ: 14 ಸೈಟ್​ಗಳ ದಾಖಲೆ ಪರಿಶೀಲಿಸಿದ ಇಡಿ

ಮೈಸೂರು

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ   ಕಚೇರಿ ಮತ್ತು ಮುಡಾ ಪ್ರಕರಣದ ಎ4 ದೇವರಾಜು ಮನೆ ಮೇಲೆ ಶುಕ್ರವಾರ (ಅ.18) ರಂದು ಜಾರಿ ನಿರ್ದೇಶನಾಲಯ   ಅಧಿಕಾರಿಗಳು ದಾಳಿ ಮಾಡಿದ್ದರು. ರಾತ್ರಿವರೆಗೂ ಅಧಿಕಾರಿಗಳು ಮುಡಾ   ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. 

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ಹಂಚಿಕೆಯಾಗಿದ್ದ 14 ನಿವೇಶನ ​ಮತ್ತು ಕೆಸರೆ ಗ್ರಾಮದ ಸರ್ವೆ ನಂ‌.464ರ ಜಮೀನಿನ ದಾಖಲೆಗಳನ್ನು ಇಡಿ ಅಧಿಕಾರಿಗಳು ಪರಿಶೀಲಿಸಿದರು. ಜೊತೆಗೆ ಇಡಿ ಅಧಿಕಾರಿಗಳು ತಾಲೂಕು ಕಚೇರಿಯಲ್ಲೂ ಸರ್ವೆ ನಂ.464ರ ಜಮೀನುಗಳ ದಾಖಲೆ ಪರಿಶೀಲನೆ ನಡೆಸಿದರು. ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂ‌.464 ಭೂಮಿಗೆ ಸಂಬಂಧಿಸಿದ 1970 ನೇ ಇಸವಿಯ ಎಂಆರ್​ ಪ್ರತಿಯನ್ನು ಪಡೆದರು. ಅಲ್ಲದೇ ತಹಶೀಲ್ದಾರ್, ಎಫ್​ಡಿಎ, ಎಸ್​ಡಿಎ ಸೇರಿದಂತೆ ಇತರರ ಬಳಿ ಹಲವು ಮಾಹಿತಿ ಕೇಳಿ ಪಡೆದರು. 

   ಮುಡಾ ಕಚೇರಿ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಮುಡಾ ಅಕ್ರಮ, 14 ಸೈಟ್, ಅಧಿಸೂಚನೆ, ಡಿನೋಟಿಫಿಕೇಷನ್, ಭೂಸ್ವಾಧೀನ, ಪರಿಹಾರ, ಹಂಚಿಕೆ ಪತ್ರ, ಸಿಎಂ ಪತ್ನಿ ಪಡೆದಿದ್ದಾರೆ ಎನ್ನಲಾದ 14 ಸೈಟ್‌ಗಳು ಸೇರಿದಂತೆ ಇಡಿ ಮುಡಾದಲ್ಲಿ ನಡೆದಿರುವ ಹಗರಣದ ಬಗ್ಗೆ ಇಡಿ ಪ್ರಶ್ನೆ ಕೇಳಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 41 ಪ್ರಶ್ನೆಗಳ ಮುಡಾ ಆಯುಕ್ತರ ಮುಂದಿಟ್ಟಿತ್ತು.

 
  ಇಡಿ ಅಧಿಕಾರಿಗಳು ಇಂದೂ ಸಹ ಮುಡಾ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮುಡಾ ಕಚೇರಿಗೆ ಇಡಿ ಅಧಿಕಾರಿಗಳು ತೆರಳಲಿದ್ದಾರೆ. ಶುಕ್ರವಾರ ಬೆಳಗ್ಗೆ 11 ರಿಂದ ರಾತ್ರಿ 11ರವರೆಗೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸತತ 12 ಗಂಟೆಗಳ ಕಾಲ ಮುಡಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

Recent Articles

spot_img

Related Stories

Share via
Copy link