ನನ್ನ ವಿರೋಧಿಗಳು ನನಗೆ ಬಹಳಷ್ಟು ಕಲಿಸಿದ್ದಾರೆ : ರಾಹುಲ್‌ ಗಾಂಧಿ

ಗದಗ: 

       ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ ಯುವ ಸಂವಾದ ಕಾರ್ಯಕ್ರಮದಲ್ಲಿ ಗದಗ ನಗರದಲ್ಲಿ ಯುವಕರೊಂದಿಗೆ ಸಂವಾದ ನಡೆಸಿದರು ಮತ್ತು ಭಾರತ್ ಜೋಡೋ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು.

      ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ರಾಹುಲ್, 2 ಕೋಟಿ ಉದ್ಯೋಗಗಳ ಭರವಸೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ಎಂಬಿಎ ಪದವೀಧರರು ಮತ್ತು ಎಂಜಿನಿಯರ್‌ಗಳು ಡೆಲಿವರ್ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.

      ನೀವು ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದ ಹಣದುಬ್ಬರವನ್ನು ಹೋಲಿಕೆ ಮಾಡಿದರೆ, ವ್ಯತ್ಯಾಸವು ತುಂಬಾ ದೊಡ್ಡದಾಗಿದೆ. ನಾವು ಅಧಿಕಾರದಲ್ಲಿದ್ದಾಗ 70 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಈಗ 100 ರೂಪಾಯಿ ದಾಟಿದೆ, ಎಲ್‌ಪಿಜಿ ಬೆಲೆ 400 ರೂಪಾಯಿ ಇದ್ದು, ಈಗ 1200 ರೂಪಾಯಿಗಿಂತ ಹೆಚ್ಚಿದೆ ಎಂದು  ರಾಹುಲ್ ಹೇಳಿದರು.

      ಅದಾನಿ ವಿಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಏನು ಕೇಳಿದೆ?  ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ. ಎಲ್ಲಿ ಭೇಟಿ ನೀಡಿದರೂ ಅಲ್ಲಿ ಅದಾನಿ ಪ್ರಾಜೆಕ್ಟ್‌ಗಳನ್ನು ಪಡೆಯುತ್ತಾರೆ. ಭಾರತದ ಕೆಲವು ದೊಡ್ಡ ವಿಮಾನ ನಿಲ್ದಾಣಗಳನ್ನು ಅನರ್ಹ ಉದ್ಯಮಿಗಳಿಗೆ ಹಸ್ತಾಂತರಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಉತ್ತೇಜಿಸಲು ಮತ್ತು ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತದಲ್ಲಿ, ಒಬ್ಬ ಸಾಮಾನ್ಯ ವ್ಯಕ್ತಿಗೆ ಸಾಲ ಪಡೆಯಲು ಕಷ್ಟವಾಗುತ್ತದೆ, ಆದರೆ ಕೆಲವು ಉದ್ಯಮಿಗಳಿಗೆ ಸುಲಭವಾಗಿ ಸಿಗುತ್ತದೆ ಎಂದು ವಿವರಿಸಿದರು.

     ನಂತರ ರಾಹುಲ್ ಮೊದಲ ಬಾರಿಗೆ ಮತದಾರರೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳನ್ನು ಆಹ್ವಾನಿಸಿದರು. ಗದಗದ ಯುವತಿ ತೃಪ್ತಿ ಕೊಠಾರಿ, ಜನರು ತಮ್ಮ ಮಾನಹಾನಿ ಮಾಡಿದಾಗ ನೀವು ಹೇಗೆ ನಿಭಾಯಿಸುತ್ತೀರಿ ಎಂದು ರಾಹುಲ್ ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ನನ್ನ ವಿರೋಧಿಗಳು ನನಗೆ ಬಹಳಷ್ಟು ಕಲಿಸಿದ್ದಾರೆ, ಅದರಿಂದ ನಾನು ತುಂಬಾ ಕಲಿತಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನನಗೆ ಅಪಾರ ಪ್ರೀತಿ ಸಿಕ್ಕಿತು ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap