“ಕಲ್ಕಿ 2898 ಎಡಿ ” ನಿರ್ಧೇಶಕ ಬಳಸೋ ಕಾರು ಯಾವುದು ಗೊತ್ತಾ….?

ತೆಲಂಗಾಣ :

    ಯಾವುದಾದರೂ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೆ ಅಂಥ ನಿರ್ದೇಶಕರ ಲೆವೆಲ್ ಬೇರೆಯೇ ಆಗಿ ಬಿಡುತ್ತದೆ. ಅವರ ಲೈಫ್​ಸ್ಟೈಲ್ ಕೂಡ ಸಾಕಷ್ಟು ಬದಲಾಗುತ್ತದೆ. ಸಿನಿಮಾ ಗೆದ್ದ ಬಳಿಕ ಮನೆಗೊಂದು ಐಷಾರಾಮಿ ಕಾರು ಬಂದರೂ ಅಚ್ಚರಿ ಏನಿಲ್ಲ. ಆದರೆ, ಇಲ್ಲೊಬ್ಬರು ನಿರ್ದೇಶಕರು ಇದ್ದಾರೆ. ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಅವರು ಮಾತ್ರ ಸಿಂಪಲ್ ಆಗಿದ್ದಾರೆ.

   ಅವರು ಬೇರೆ ಯಾರೂ ಅಲ್ಲ ನಾಗ್ ಅಶ್ವಿನ್. ಹೌದು, ‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಅವರು ಈಗ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಪುಟಾಣಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ.

  ನಾಗ್ ಅಶ್ವಿನ್ ಅವರು ಮಹಿಂದ್ರಾ ಎಲೆಕ್ಟ್ರಿಕ್ ಕಾರು e2oplus ಕಾರ್​ನ ಚಲಾಯಿಸಿಕೊಂಡು ಹೋಗಿದ್ದಾರೆ. ಅವರದ್ದೇ ಮನೆಯ ಸೋಲಾರ್ ಪ್ಯಾನಲ್ ಮೂಲಕ ಉತ್ಪಾದನೆಯಾದ ವಿದ್ಯುತ್​ನಿಂದ ಕಾರನ್ನು ಚಾರ್ಜ್ ಮಾಡಲಾಗಿದೆ.  ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರನ್ನು ನೋಡಿ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

   ‘ಕಲ್ಕಿ 2898 ಎಡಿ’ ಬಳಿಕ ಸೀಕ್ವೆಲ್​ಗೆ ನಾಗ್ ಅಶ್ವಿನ್ ಸಿದ್ಧರಾಗುತ್ತಿದೆ. ಈ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಮುಖ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದರು.  ಕಮಲ್ ಹಾಸನ್ ಈ ಚಿತ್ರದ ವಿಲನ್ ಆಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ದೀಪಿಕಾಗೆ ಮಗು ಜನಿಸಿರುವುದರಿಂದ ಮುಂದಿನ ವರ್ಷ ಅವರು ಸೆಟ್ ಸೇರಲಿದ್ದಾರೆ.

Recent Articles

spot_img

Related Stories

Share via
Copy link
Powered by Social Snap