ಕೋಲ್ಕತ್ತಾ
ಕರ್ನಾಟಕದ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ (ಅಜೇಯ 67) ಹಾಗೂ ಆಲ್ ರೌಂಡರ್ ಆಂಡ್ರಿ ರಸೆಲ್ (17 ಎಸೆತಗಳಲ್ಲಿ 48) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 219 ರನ್‍ಗಳ ಸವಾಲಿನ ಮೊತ್ತವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನೀಡಿದೆ.
ಬುಧವಾರ ನಡೆದ 12ನೇ ಆವೃತ್ತಿ ಐಪಿಎಲ್‍ನ 6ನೇ ಪಂದ್ಯದಲ್ಲಿ ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತು.
ಆರಂಭಿಕ ಕ್ರಿಸ್ ಲೈನ್ (10) ಹಾಗೂ ಸುನಿಲ್ ನರೈನ್ (24) ತಂಡಕ್ಕೆ ಭರ್ಜರಿ ಆರಂಭ ನೀಡಲಿಲ್ಲ. 36 ರನ್‍ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಾಬಿನ್ ಹಾಗೂ ನಿತೀಶ್ ರಾಣಾ ಆಧಾರವಾದರು. ಈ ಜೋಡಿ ಕಿಂಗ್ಸ್ ತಂಡದ ಯೋಜನೆಯನ್ನು ಬುಡಮೇಲು ಮಾಡಿತು.
ಈ ಜೋಡಿ ಮೂರನೇ ವಿಕೆಟ್‍ಗೆ 66 ಎಸೆತಗಳಲ್ಲಿ 110 ರನ್ ಕಾಣಿಕೆ ನೀಡಿ ಅಬ್ಬರಿಸಿತು. ನಿತೀಶ್ ರಾಣಾ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ವರುಣ್‍ಗೆ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟ್ಸ್ ಮನ್ ಆಂಡ್ರಿ ರಸೆಲ್ ಕೇವಲ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಾಯದಿಂದ 48 ರನ್ ಬಾರಿಸಿ ಆರ್ಭಟಿಸಿದರು. ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 67 ರನ್ ಬಾರಿಸಿ ಅಜೇಯರಾಗುಳಿದರು. ಪಂಜಾಬ್ ತಂಡದ ಬೌಲರ್ ಗಳು ರನ್ ನೀಡಿ ಕೈ ಸುಟ್ಟುಕೊಂಡರು.
ಸಂಕ್ಷಿಪ್ತ ಸ್ಕೋರ್.
ಕೋಲ್ಕತ್ತಾ ನೈಟ್ ರೈಡರ್ಸ್ 218/4 (20)
ರಾಬಿನ್ ಉತ್ತಪ್ಪ ಅಜೇಯ 67
ನಿತೀಶ್ ರಾಣಾ 63
ಆಂಡ್ರಿ ರಸೆಲ್ 48
ಕೋಲ್ಕತ್ತಾ ನೈಟ್ ರೈಡರ್ಸ್
ಕ್ರಿಸ್‍ಲೀನ್, ನಿತಿಶ್‍ರಾಣಾ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್, ಶುಬ್ಮನ್ ಗಿಲ್, ಅಂಡ್ರಿ ರಸೆಲ್, ಸುನಿಲ್‍ನರೈನ್, ಪಿಯುಷ್‍ಚಾವ್ಲಾ, ಕುಲ್ದೀಪ್ ಯಾದವ್, ಲೊಕಿ ಫಗ್ರ್ಯೂಸನ್, ಪ್ರಸಿದ್ಧಕ್ರಿಷ್ಣ
ಕಿಂಗ್ಸ್ ಎಲೆವನ್ ಪಂಜಾಬ್
ಲೋಕೇಶ್ ರಾಹುಲ್, ಕ್ರಿಸ್ ಗೇಯ್ಲ್, ಮಯಾಂಕ್ ಅಗರ್‍ವಾಲ್, ಸರ್‍ಫರಾಜ್‍ಖಾನ್, ಡೇವಿಡ್‍ಮಿಲ್ಲರ್, ಮನ್‍ದೀಪ್ ಸಿಂಗ್, ಹರ್ದುಸ್‍ವಿಲ್ಜೋಯಿನ್, ರವಿಚಂದ್ರನ್ ಅಶ್ವಿನ್, ವರುಣ್‍ಚಕ್ರವರ್ತಿ, ಮಹಮ್ಮದ್ ಶಾಮಿ, ಆಂಡ್ರಿಟೈ