ಶ್ರೀನಗರ:
ಪುಲ್ವಾಮಾ ಉಗ್ರ ದಾಳಿಯಾದ ಬಳಿಕ ಪ್ರತ್ಯೇಕತವಾದಿ ನಾಯಕರಿಗೆ ನೀಡಿದ್ದ ವಿಶೇಷ ಭದ್ರತೆ ವಾಪಸ್ ಪಡೆದ ಹಿಂದೆಯೇ ಪ್ರತ್ಯೇಕತಾವಾದಿ ನಾಯಕರಿಗೆ ಪೊಲೀಸರು ದೊಡ್ಡ ಶಾಕ್ ನೀಡಿದ್ದಾರೆ
ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮುಖ್ಯಸ್ಥ ಮೊಹಮ್ಮದ್ ಯಾಸೀನ್ ಮಲಿಕ್ ನನ್ನು ಪೊಲೀಸರು ಬಂಧಿಸುವ ಮೂಲಕ ಇತರೆ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ಮತ್ತು ಜಮಾತ್ ಇ ಇಸ್ಲಾಂ ಮುಖಂಡ ಅಬ್ದುಲ್ ಹಮೀದ್ ಫಯಾಜ್ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಯಾಸೀನ್ ಮಲಿಕ್ ಅವರ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಮೊಹಮ್ಮದ್ ಯಾಸೀನ್ ಮಲಿಕ್ ರನ್ನು ಬಂಧಿಸಿದ್ದಾರೆ ಎಂದು ಜೆಕೆಎಲ್ಎಫ್ ವಕ್ತಾರ ತಿಳಿಸಿದ್ದಾ.
ಯಾಸೀನ್ ಮಲಿಕ್ ಬಂಧನ ಕುರಿತಂತೆ ಪೊಲೀಸರು ಇನ್ನೂ ಯಾವುದೇ ನಿಖರ ಕಾರಣ ತಿಳಿಸಿಲ್ಲ. ಕೋತಿಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ವಕ್ತಾರರು ತಿಳಿಸಿದ್ದಾರೆ.