ನವದೆಹಲಿ: 

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಾದ್ಯಂತ ಇದಾಗಲೇ ಮಾದರಿ ನೀತಿ ಸಂಹಿತೆ ಜಾರಿ ಮಾಡಿದೆ. ಈ ನಡುವೆ ನೀತಿ ಸಂಹಿತೆ ಜಾರಿಯಾದಂದಿನಿಂದ ಇಂದಿನವರೆಗೆ ಸುಮಾರು 540 ಕೋಟಿ ರೂ. ಮೌಲ್ಯದ ನಗದು, ಅಕ್ರಮ ಮದ್ಯ ಮತ್ತು ಡ್ರಗ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ತಮಿಳುನಾಡು ರಾಜ್ಯದಲ್ಲಿ ಇಂತಹಾ ಅಕ್ರಮ ಹಣ, ಮದ್ಯದ ವಶದ ಪ್ರಮಾಣ ಗರಿಷ್ಠವಾಗಿದೆ.. ರೂ. 107.24 ಕೋಟಿ ನಗದನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಂಡರೆ ಉತ್ತರ ಪ್ರದೇಶದಲ್ಲಿ 104.53 ಕೋಟಿ, ಆಂಧ್ರಪ್ರದೇಶದಲ್ಲಿ 103.4 ಕೋಟಿ ಮತ್ತು ಪಂಜಾಬ್ ನಲ್ಲಿ 92.8 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹೇಳಿದೆ.
ಕರ್ನಾಟಕದಲ್ಲಿ ವಶಕ್ಕೆ ಪಡೆಯಲಾದ ನಗದು ಸೇರಿ ಒಟ್ಟಾರೆ ಅಕ್ರಮ ವಸ್ತುಗಳ ಮೌಲ್ಯ 26.53 ಕೋಟಿ ರೂ ಆಗಿದ್ದರೆ ಮಹಾರಾಷ್ಟ್ರದಲ್ಲಿ 19.11 ಕೋಟಿ, ತೆಲಂಗಾಣ 8.2 ಕೋಟಿ ರೂ. ಆಗಿದೆ.
ಚುನಾವಣಾ ಆಯೋಗವು ಇದುವರೆಗೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯ 539.99 ಕೋಟಿ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಾರ್ಚ್ 10ರಂದು ಚುನಾವಣಾ ಆಯೋಗವು ಚುನಾವಣೆ ದಿನಾಂಕಗಳನ್ನು ಘೋಷಿಸಿದ್ದು ಮಾರ್ಚ್ 25 ರವರೆಗೂ ವಿವರಿಸಲ್ಪಟ್ಟ ಮಾಹಿತಿಯಂತೆ ಒಟ್ಟು 143.37 ಕೋಟಿ ರೂ. ನಗದು, 89.64 ಕೋಟಿ ಮೌಲ್ಯದ ಮದ್ಯ, 131.75 ಕೋಟಿ ರೂ. ಮೌಲ್ಯದ ಡ್ರಗ್ಸ್, , ಚಿನ್ನ ಮತ್ತು ರೂ. 162.93 ಕೋಟಿ ರೂ.ಮೊತ್ತದ ಇತರ ಬೆಲೆಬಾಳುವ ವಸ್ತುಗಳು ಜಪ್ತಿಯುಆಗಿದೆ ಎಂದು ಅಂಕಿ ಅಂಶಗಳು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
