ಶ್ರೀನಗರ :
ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೌಲಾನ ಮಸೂದ್ ಅಜಾದ್ ಸ್ಥಾಪಿಸಿದ ಜೈಶ್ -ಇ- ಮೊಹಮ್ಮದ್ ಸಂಘಟನೆಯ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯ ಟ್ರಾಲ್ ಗ್ರಾಮದ ಬಳಿ ಇಡೀ ದಿನ ನಡೆದ ಕಾರ್ಯಾಚರಣೆ ನಂತರ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿರುವುದಾಗಿ ಅವರು ಹೇಳಿದ್ದಾರೆ.ಭದ್ರತಾ ಪಡೆಗಳ ಮೇಲೆ ಸ್ನೈಪರ್ ದಾಳಿಯನ್ನು ನಡೆಸಲು ಬಳಸಿದ ಎಮ್ -4 ಕಾರ್ಬೈನ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








