ಪುಲ್ವಾಮ ಎನ್ಕೌಂಟರ್ : ಹುತಾತ್ಮರಾದ ಇಬ್ಬರು ಯೋಧರು …!!!

0
73

ಶ್ರೀನಗರ:

      ಕಾಶ್ಮೀರದ ಪುಲ್ವಾಮ್ ಸೆಕ್ಟರ್ ನಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ, ಪುಲ್ವಾಮ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು ಓರ್ವ ಭಯೋತ್ಪಾದಕ ಬಲಿಯಾಗಿದ್ದಾನೆ.

       ರತ್ನಿಪೋರಾ ಪ್ರಾಂತ್ಯದಲ್ಲಿ ಉಗ್ರರು ಅಡಗಿರುವುದನ್ನು ಖಚಿತ ಪಡಿಸಿದಕೊಂಡ ಸೈನಿಕರು ಕೂಡಲೇ ಕಾರ್ಯಾಚರಣೆ ನಡೆಸಿದ್ದಾರೆ,ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಈ ಕಾಳಗದಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಓರ್ವ ಉಗ್ರ ಬಲಿಯಾಗಿದ್ದಾನೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
       ಭಾರತೀಯ ಸೇನೆಯ ವಿಶೇಷ ತಂಡಗಳಲ್ಲಿ ಒಂದಾದ 50 ರಾಷ್ಟ್ರೀಯ ರೈಫಲ್ಸ್ ಹಾಗೂ 10 ಪಾರಾಗಣ ಮತ್ತು ಸಿಆರ್ ಪಿಎಫ್ ಯೋಧರು ಸಂಯುಕ್ತವಾಗಿ ಕಾರ್ಯಚರಣೆ ನಡೆಸಿದ್ದಾರೆ ಮತ್ತು ಮತ್ತಷ್ಟು ಉಗ್ರರನ್ನು ಮಟ್ಟಹಾಕಲು ಎನ್ಕೌಂಟರ್ ಮುಂದುವರೆದಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here