ರಸ್ತೆ ಅಪಘಾತ; 8 ಕಾರ್ಮಿಕರ ದುರ್ಮರಣ..!!

ಛತ್ರಂ

     ತಮಿಳುನಾಡಿನ ವಿಲ್ಲಿಪುರಂ ಜಿಲ್ಲೆಯ ಕಲ್ಲಕುರಿಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಗ್ರಾಮಗಳ ಎಂಟು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

     ಕಾಂಚೀಪುರಂ ಜಿಲ್ಲೆಯಿಂದ ಪ್ರಸರಣ ಗೋಪುರ ಅಳವಡಿಕೆ ಕೆಲಸಕ್ಕಾಗಿ ತಿರುಪುರ ಜಿಲ್ಲೆಯ ಕಂಗಾಯಂಗೆ ತೆರಳುತ್ತಿದ್ದ ಟ್ರಕ್ ಗೆ ಮಿನಿ ಬಸ್ ಗೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಕೆಲವು ಕಾರ್ಮಿಕರು ಸಹ ಗಾಯಗೊಂಡಿದ್ದಾರೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ .ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಮೃತರನ್ನು ಉತ್ತಾ ಗ್ರಾಮದ ಸಿಕಂದರ್ ಭುಯಾನ್, ರಾಜು ಭುಯಾನ್, ಮನೋಜ್ ರಜಾಕ್, ಕರು ರಜಾಕ್ ಮತ್ತು ಮದನ್ ಭುಯಾನ್, ಮಂಗರ್ದಾಹ ಗ್ರಾಮದ ಅನುಜ್ ಭುಯಾನ್, ಮತ್ತು ಅಶೋಕ ರಜಾಕ್, ತಾಂಡ್ವಾ ಗ್ರಾಮದ ಚಮ್ನಾ ರಜಾಕ್ ಎಂದು ಗುರುತಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link