ಮಣಿಪುರ :
ನಮ್ಮ ದೇಶದಲ್ಲಿ ಮನೆಯ ಪಕ್ಕದಲ್ಲಿ ಯಾವುದಾದರು ಮರ ಇದ್ದರೆ ಅದನ್ನು ಹೇಗಾದರು ಮಾಡಿ ತೆಗೆದು ಆಜಾಗದಲ್ಲಿ ನಮ್ಮ ವಾಹನ ನಿಲುಗಡೆಗೊ ಅಥವಾ ಹಳ್ಳಿಯಲ್ಲಾದರೆ ದನದ ಕೊಟ್ಟಿಗೆ ನಿರ್ಮಾಣಕ್ಕೊ ಬಳಸಿಕೊಳ್ಳಬಹುದು ಎನ್ನುವುದು ಸರ್ವೇ ಸಾಮಾನ್ಯ.ಆದರೆ ಭಾರತದ ಇಷ್ಟು ದೊಡ್ಡ ಜನಸಂಖ್ಯೆಯಲ್ಲಿ ಆ ಮೂಕ ಜೀವಗಳಿಗೂ ಮಿಡಿಯುವವರು ಇರುತ್ತಾರೆ ಮತ್ತು ಅವರು ಅವುಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿರುತ್ತಾರೆ ಅಂತಹವರಲ್ಲಿ ಒಬ್ಬಳು ವ್ಯಲೆಂಟೀನಾ.
ಅಸಲಿಗೆ ಯಾರು ವ್ಯಾಲೆಂಟೀನಾ?
ಮಣಿಪುರ ಸರ್ಕಾರ ಕೆಲವು ದಿನಗಳ ಹಿಂದೆ ತನ್ನ ರಾಜ್ಯದ ರಸ್ತೆಗಳ ಅಗಲಿಕರಣಕ್ಕಾಗಿ ದೊಡ್ಡ ಯೋಜನೆಯೊಂದನ್ನು ರೂಪಿಸಿಕಾರ್ಯಗತ ಮಾಡಿತ್ತು ಇದೇ ಭರದಲ್ಲಿ ಕಕಚಿಂಗ್ ಗ್ರಾಮದಲ್ಲೂ ರಸ್ತೆಯ ಪಕ್ಕದಲ್ಲಿ ಅಡ್ಡಲಾಗಿ ಬೆಳೆದಿದ್ದ ಮರಗಳನ್ನು ಕಡಿಯು ಮುಂದಾಗಿದ್ದರು ಕೆಲಸವೂ ಶುರುಮಾಡಿದ್ದರು ಎಲ್ಲಾ ಸಲಿಸಾಗಿ ನಡೆಯುತ್ತಿದೆ ಎನ್ನುವಷ್ಡರಲ್ಲಿ 9 ವರ್ಷದ ವಾಲೆಂಟೀನಾ ಇದ್ದಕ್ಕಿದಂತೆ ಜೋರಾಗಿ ಅಳುವುದಕ್ಕೆ ಶುರು ಮಾಡಿದಳು ಯಾಕೆ ಏನಾಯಿತು ಎಂದು ವಿಚಾರಿಸಿದಾಗ ತಾನು ಚಿಕ್ಕವಳಿದ್ದಾಗಿನಿಂದ ಬೆಳೆಸಿದ್ದ ಎರಡು ಮರಗಳನ್ನು ರಸ್ತೆ ಮಾಡುವವರು ಕಡಿದಿದ್ದಾರೆ ಎಂದು ಜೋರಾಗಿ ಅತ್ತಿದ್ದ ವಿಡೀಯೋ ವೈರಲ್ ಆಗಿತು ಇದನ್ನು ಗಮನಿಸಿದ ಮಣಿಪುರದ ಸಿಎಂ ತಾನು ಬೆಳೆಸಿದ ಮತ್ತು ಅದರ ಸುತ್ತ ಇದ್ದ ಮರಗಳು ನೆಲಸಮಾವಾಗಿದ್ದಕೆ ಅಳುತ್ತಿದ್ದ ಪುಟ್ಟ ಹುಡುಗಿಯನ್ನು ಕಂಡು ಬೆರಗಾದ ಸಿಎಂ ಆ ಹುಡುಗಿಯನ್ನು ರಾಜ್ಯದ ಹಸಿರು ರಾಯಭಾರಿಯಾಗಿ ನೇಮಿಸಿದೆ.
“ ಗ್ರೀನ್ ಮಣಿಪುರ ಮಿಷನ್ ಗೆ ಈ ಹುಡುಗಿಗಿಂತ ಉತ್ತಮ ರಾಯಭಾರಿ ಇರಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡು . ಇಷ್ಟು ಚಿಕ್ಕ ವಯಸ್ಸಿನಲ್ಲಿ ಮರಗಳ ಬಗ್ಗೆ ಅವಳ ಪ್ರೀತಿ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ”,
ಎಲಾಂಗ್‌ಬಾಮ್ ಪ್ರೇಮ್‌ಕುಮಾರ್ ಸಿಂಗ್ ಅವರ ಪುತ್ರಿ ವ್ಯಾಲೆಂಟಿನಾ ಮಣಿಪುರದ ಹಸಿರು ಸಂಪತ್ತಿನ ವೃದ್ಧಿಯನ್ನು ಉತ್ತೇಜಿಸುವುದಕ್ಕಾಗಿ ರುಪಿಸಲಾಗುವ ಎಲ್ಲಾ ಜಾಹೀರಾತುಗಳು ಮತ್ತು ಪ್ರಚಾರಗಳ ಭಾಗವಾಗಿರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಮತ್ತು ಆಕೆ ಅಭಿನನಯಿಸಸುವ ಜಾಹಿರಾತಿಗಾಗಿ ಆ ಹುಡುಗಿಗೆ ಸರ್ಕಾರದಿಂದ ಗೌರವ ಧನ ಮತ್ತು ಬೇರೆಡೆಗೆ ತೆರಳಿದಲ್ಲಿ ಅಲ್ಲಿ ವ್ಯವಸ್ಥೆಯ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.