ನವದೆಹಲಿ:
ದೇಶದ ಪ್ರತಿಷ್ಠಿತ ಯುದ್ಧಗಳಲ್ಲಿ ಒಂದಾದ ಕಾರ್ಗಿಲ್ ಸಂದರ್ಭದಲ್ಲಿ ಸೇನೆಗೆ ಬೆಂಬಲವಾಗಿ ನಿಂತ ಮಿಗ್ ವಿಮಾನಗಳನ್ನು ಇಂದು ಅಧಿಕೃತವಾಗಿ ಸೇನೆಯಿಂದ ನಿವೃತಿ ಮಾಡಲು ವಾಯುಪಡೆ ನಿರ್ಧರಿಸಿದೆ .
ದಶಕಗಳ ಕಾಲ ದಣಿವರಿಯದೆ ಕಾರ್ಯ ನಿರ್ವಹಿಸಿ ಭಾರತೀಯ ವಾಯುಸೇನೆಯ ಬಲ ಇಮ್ಮಡಿಗೊಳಿಸಿದ್ದ ಭಾರತದ ಹೆಮ್ಮೆಯ ಮಿಗ್ 27 ಯುದ್ಧ ವಿಮಾನಗಳಿಗೆ ಇಂದು ಅಧಿಕೃತವಾಗಿ ಸೇನೆಯಿಂದ ಬೀಳ್ಗೊಡುಗೆ ನೀಡಲಾಗುತ್ತಿದೆ. 1999ರ ಕಾರ್ಗಿಲ್ ಯುದ್ಧದ ಹೀರೋ ಮಿಗ್–27 ಯುದ್ಧ ವಿಮಾನಗಳ ಸೇವೆ ಇಂದಿನಿಂದ ಅಧಿಕೃತವಾಗಿ ಕೊನೆಯಾಗಲಿದೆ , ಜೋಧ್ ಪುರದ ವಾಯುನೆಲೆಯಲ್ಲಿ ಈ ವಿಮಾನಗಳಿಗೆ ನೆಲೆ ಕಲ್ಪಿಸಲಾಗಿದೆ. ವಾಯುಪಡೆ ಬಳಿ ಕೇವಲ ಏಳು ರಷ್ಯಾ ನಿರ್ಮಿತ ಮಿಗ್ 27 ಮಾತ್ರ (ಲಾಸ್ಟ್ ಸ್ಕ್ಯಾಡ್ರನ್) ಉಳಿದಿದ್ದು, ಇದಕ್ಕೆ ಸ್ಕಾರ್ಪಿಯನ್ 29 ಎಂಬ ಹೆಸರಿದೆ. ಅವುಗಳನ್ನು ರಾಜಸ್ಥಾನದ ಜೋಧ್‌ಪುರ ವಾಯುನೆಲೆಯಲ್ಲಿ(ನೈರುತ್ಯ ವಾಯುಪಡೆ) ಇರಿಸಲಾಗಿದೆ.
भारतीय वायु सेना के बेड़े में 1985 में शामिल किया गया यह अत्यंत सक्षम लड़ाकू विमान ज़मीनी हमले की क्षमता का आधार रहा है। वायु सेना के सभी प्रमुख ऑपरेशन्स में भाग लेने के साथ मिग-27 नें 1999 के कारगिल युद्ध में भी एक अभूतपूर्व भूमिका निभाई थी। pic.twitter.com/9EtQv71sOh
— Indian Air Force (@IAF_MCC) December 26, 2019
ಡಿ. 27 2019 ಅಂದರೆ ಇಂದು ಕೊನೆಯ ಬಾರಿಗೆ ಈ ಏಳು ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಿದ ನಂತರ ಅವುಗಳನ್ನು ನಿಷ್ಕ್ರೀಯಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲಿಗೆ ಇನ್ನೆರಡು ದಿನಗಳಲ್ಲಿ ದೇಶಾದ್ಯಂತ ಮಿಗ್-27 ಹಾರಾಟ ಬಂದ್ ಆಗಲಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಅವರು ಹೇಳಿದ್ದಾರೆ.