ನವದೆಹಲಿ
ಈವರೆಗೂ ಕ್ರಿಕೆಟ್ ಆಟದ ವೇಳೆ ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಸುತ್ತಿದ್ದ ವಿಧಾನವನ್ನು ನಿಷೇಧಿಸಬೇಕು ಎಂದು ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ನೇತೃತ್ವದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಮಿತಿ ಶಿಫಾರಸು ಮಾಡಿದೆ. ಕೊರೊನಾವೈರಸ್ ಕಾರಣ ಕ್ರಿಕೆಟ್ ಕಮಿಟಿ ಈ ನಡೆ ತೋರಿದೆ.
ಆದರೆ ಬೆವರಿನ ಬಳಕೆಗೆ ಐಸಿಸಿ ಕ್ರಿಕೆಟ್ ಕಮಿಟಿ ನಕಾರ ಸೂಚಿಸಿಲ್ಲ. ಬೆವರು ಬಳಕೆಯಿಂದ ಆಯೋಗ್ಯಕ್ಕೆ ಅಪಾಯ ಎದುರಾಗುವುದನ್ನು ಐಸಿಸಿ ಕಮಿಟಿ ಕಂಡಂತೆ ಇಲ್ಲ. ಬೆವರು ಬಳಕೆಗೆ ಸದ್ಯಕ್ಕೆ ನಿಷೇಧ ಹೇರಲು ಕಮಿಟಿ ಶಿಫಾರಸು ಮಾಡಿಲ್ಲ. ಇದರರ್ಥ ಆ ವಿಧಾನ ಮುಂದುವರಿಯಲಿದೆ.ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ಕ್ರಿಕೆಟ್ ಕಮಿಟಿ, ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳಿಗೆ ಇಬ್ಬರು ತಟಸ್ಥವಲ್ಲದ (ನಾನ್ ನ್ಯೂಟ್ರಲ್) ಅಂಪೈರ್‌ಗಳನ್ನು ಮರಳಿ ತರಲು ಸಮಿತಿಯು ಮುಂದಾಯಿತು. ಅಷ್ಟೇ ಅಲ್ಲದೆ ಪ್ರಯಾಣ ನಿರ್ಬಂಧ ವಿಧಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.
ಐಸಿಸಿ ಸಮಿತಿ, ಮತ್ತೊಂದು ಪ್ರಮುಖ ಶಿಫಾರಸನ್ನು ವಿಶ್ವ ಕ್ರಿಕೆಟ್ ಮಂಡಳಿಗೆ ಮಾಡಿದೆ. ಅದೇನೆಂದರೆ, ಪ್ರತೀ ಇನ್ನಿಂಗ್ಸ್‌ನಲ್ಲಿ 2 ಡಿಆರ್‌ಎಸ್ (ಡಿಸಿಶನ್ ರಿವ್ಯೂ ಸಿಸ್ಟಮ್) ಬದಲಿಗೆ ಹೆಚ್ಚುವರಿ 1 ಅಂದರೆ ಒಟ್ಟಿಗೆ 3 ಡಿಆರ್‌ಎಸ್‌ಗಳಿಗೆ ಅವಕಾಶ ನೀಡುವಂತೆ ಐಸಿಸಿಗೆ ಶಿಫಾರಸು ಮಾಡಿದೆ.