ಅಶ್ಲೀಲತೆ ವಿರುದ್ಧದ ಸಮರಕ್ಕೆ ಅಡ್ಡಿಯಾಗುತ್ತಿವೆಯೇ APP ಗಳು..!

ನವದೆಹಲಿ:

   ಭಾರತದ ಪ್ರಧಾನ ಮಂತ್ರಿ ಅವರು ಭಾರತವನ್ನು ಸಂಪೂರ್ಣ ಡಿಜಿಟಲೀಕರಿಸುವ ಭರದಲ್ಲಿ ಅದರಿಂದಾಗುತ್ತಿರುವ ಅನಾಹುತ ಅಥವಾ ಅಪರಾಧಗಳ ಕುರಿತಾಗಿ ಯೋಚಿಸಲು ಮರೆತಂತಿದೆ. 

    ಈ ರೀತಿಯ ಅಪರಾಧ ನಿಯಂತ್ರಣಕ್ಕೆಂದು ನಿಷೇಧ ಅಶ್ಲೀಲ ಸೈಟ್ ಗಳಿಗೆ ನಿರ್ಬಂಧ ಹೇರಿತಾದರು ಅದನ್ನು ಮೀರಿ ಆರೀತಿಯ ಸೈಟ್ ನೋಡುವವರು ಇನ್ನೂ ಹೆಚ್ಚಾಗಿದ್ದಾರೆಯೇ ಹೊರತು ಕಡಿಮೆಯಾಗಿಲ್ಲ.

    ಇದು ಹೇಗೆ ಎಂದು ನೋಡುವುದಾದರೆ ಇದು ಸಾಧ್ಯವಾಗುವುದು ವಿಪಿಎನ್ ಹೈಡರ್ ಗಳಿಂದ ವಿಪೆನ್ ಹೈಡರ್ ಉಪಯೋಗಿಸಿದರೆ ಅವರ ಮೊಬೈಲ್ ನ ಐಪಿ ವಿಳಾಸಕ್ಕೆ ಮಾಸ್ಕ್ ಹಾಕಿದಂತಾಗಿ ಅವರು ಭಾರತದಲ್ಲಿದ್ದುಕೊಂಡೆ ಬೇರೆ ದೇಶದ ಸರ್ವರ್ ಬಳಸಿ ಈ ನಿಷೇದಿತ ಸೈಟ್ ಗಳಿಗೆ ಬೇಟಿ ನೀಡುತ್ತಾರೆ ಇದು ಹೇಗಿದೆ ಎಂದರೆ ಟ್ರಾಯ್ ಚಾಪೆ ಕೆಳಗೆ ನುಸುಳಿದರೆ ನಮ್ಮ ವಿದ್ಯಾರ್ಥಿಗಳು ರಂಗೋಲೆ ಕೆಳಗೆ ನುಸುತ್ತಾರೆ ಎನ್ನುವುದಕ್ಕೆ ಉದಾಹರಣೆ.

ಇನ್ನು ಜನಪ್ರಿಯ ಮೆಸೆಂಜರ್ ಗಳಾದ ವಾಟ್ಸಾಪ್ ಮತ್ತು ಸಿಗ್ನಲ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರೂಪ್ ಮಾಡಿಕೊಂಡು ಇತಂಹವನ್ನು ನಡೆಸಿದರು ಆಕಂಪನಿಗಳು ಯಾವುದೇ ರೀತಿಯ ನಿರ್ಬಂಧವಾಗಲಿ ಏನೇ ಆಗಲಿ ವಿಧಿಸುವುದಿಲ್ಲ ಇದಕ್ಕೆ ಯಾವ ವಿಪಿಎನ್ ಸಹಾಯವು ಬೇಕಾಗಿಲ್ಲ ,ಈ ವಿಚಾರದ ಬಗ್ಗೆ ಕೇಳಿದರೆ end-to-end encryption ಎಂಬ ತಾಂತ್ರಿಕ ಪದ   ಉಲ್ಲೇಖಿಸಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವುದಿಲ್ಲ ಮತ್ತು ಕಾನೂನುಬದ್ಧವಾದ ವಿನಂತಿಗಳನ್ನು ಸಹ ಗೌರವಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾ ಮತ್ತು ಅದರ ಅಶ್ಲೀಲತೆಯ ವಿಷಯವನ್ನು ಪರಿಶೀಲಿಸುತ್ತಿರುವ ಸರ್ಕಾರಿ ಅಧಿಕಾರಿಗಳು ರಾಜ್ಯಸಭಾ ಸಮಿತಿಯೊಂದಕ್ಕೆ ತಿಳಿಸಿದ್ದಾರೆ.

ಮಕ್ಕಳ ಮೇಲೆ ಪರಿಣಾಮಗಳು.

     ಈ ತಿಂಗಳ ಆರಂಭದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲತೆಯ “ಆತಂಕಕಾರಿ ವಿಷಯ” ಮತ್ತು ಒಟ್ಟಾರೆಯಾಗಿ ಮಕ್ಕಳು ಮತ್ತು ಸಮಾಜದ ಮೇಲೆ ಅದರ ಪರಿಣಾಮಗಳ ಕುರಿತು ರಾಜ್ಯಸಭೆಯ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ರಚಿಸಿದ್ದಾರೆ.

   ಇನ್ನು ಈ ಸಮಿತಿಯು ಮೇಲ್ಮನೆಯ ಹತ್ತು ರಾಜಕೀಯ ಪಕ್ಷಗಳ ಸುಮಾರು 14 ಸದಸ್ಯರನ್ನು ಒಳಗೊಂಡಿದೆ ಎನ್ನಲಾಗಿದೆ.ಸಮಿತಿಯೂ ತನ್ನ ವರದಿ ತಯಾರಿಕೆಯ ಮೊದಲ ಭಾಗವಾಗಿ ಮಾಹಿತಿ ತಂತ್ರಜ್ಞಾನ ಸಚಿವಾಲಯ , ಟೆಲಿಕಾಂ ನಿಯಂತ್ರಕ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಲೋಂದಿಗೆ ಸಭೆ ಸೃಎಇ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

  ಇನ್ನೂ ಈ ವಿಷಯವಾಗಿ ಸಮಾಜಿಕ ಮಾಧ್ಯಮದವರನ್ನು ಕೇಳಿದರೆ ನಮ್ಮ ಸರ್ವರ್ ಗಳು ವಿದೇಶದಲ್ಲಿರುವುದರಿಂದ ನಾವು ಮಾಹಿತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ,ಇನ್ನು ನೇರವಾಗಿ ಸಂಪರ್ಕ ಮಾಡಲು ಮುಂದಾದರೆ ಆ ನೆಲದ ಕಾನೂನಿನ್ವಯ ಮಾಹಿತಿ ಪಡೆಯಲು ತಿಳಿಸುತ್ತಾರೆ ಆದರೆ ವಿದೇಶಗಳಲ್ಲಿ ಈ ಎಲ್ಲವನ್ನು ಲೈಂಗಿಕ ಶಿಕ್ಷಣದ ಒಂದು ಭಾಗವಾಗಿರುತ್ತದೆ ಆದ್ದರಿಂದ ನಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ.

   ಕೆಲವು ಸಂದರ್ಭಗಳಲ್ಲಿ, ಸಚಿವಾಲಯದ ಜೊತೆ ಮೆಟಾ ಡೇಟಾವನ್ನು ಮಾತ್ರ ಹಂಚಿಕೊಳ್ಳುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದ ಅಥವಾ ಲೆಟರ್ ರೊಗೇಟರಿಗೆ ಒತ್ತಾಯಿಸಲಾಗುತ್ತದೆ, ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ.

    ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರ ಅಧ್ಯಕ್ಷತೆಯಲ್ಲಿರುವ ಈ ಸಮಿತಿ ಮುಂದಿನ ತಿಂಗಳು ವರದಿ ಸಲ್ಲಿಸುವ ನಿರೀಕ್ಷೆಯಿದೆ.ಸಮಿತಿಯು ತಾತ್ಕಾಲಿಕವಾಗಿದ್ದರೂ, ಮಸೂದೆಯ ಆಯ್ಕೆ ಸಮಿತಿಗೆ ಸಂಬಂಧಿಸಿದ ನಿಯಮಗಳು ಅನ್ವಯಿಸುತ್ತದೆ .ಇನ್ನು ಸಮಿತಿಯಲ್ಲಿ ಇರುವವರ್ಯಾರೆಂದರೆ ಅಮರ್ ಪಟ್ನಾಯಕ್, ಅಮೀ ಯಜ್ನಿಕ್, ಡೋಲಾ ಸೇನ್, ಜಯ ಬಚ್ಚನ್, ಕಹ್ಕಶನ್ ಪರ್ವೀನ್, ರಾಜೀವ್ ಚಂದ್ರಶೇಖರ್, ಎಂ.ವಿ.ಜೀವ್ ಗೌಡ, ರೂಪಾ ಗಂಗೂಲಿ, ಸಂಜಯ್ ಸಿಂಗ್, ತಿರುಚಿ ಶಿವ, ವಂದನಾ ಚವಾಣ್, ವಿಜಿಲಾ ಸತ್ಯನಾಥ್ ಮತ್ತು ವಿನಯ್ ಪಿ ಶಸ್ರಾಬ್ ಸೇರಿದ್ದಾರೆ.

   ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಇತರ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ಚಿತ್ರಗಳನ್ನು ತಡೆಯಲು ಧೃಡವಾದ ಕ್ರಮಗಳನ್ನು ಸೂಚಿಸಲು ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ನವೆಂಬರ್ 28 ರಂದು ನಾಯ್ಡು ಕಾಂಗ್ರೆಸ್ ಸಂಸದ ರಮೇಶ್ ಅವರನ್ನು ಕೋರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap