ನವದೆಹಲಿ
ವರದಕ್ಷಿಣೆ ಹಾಗು ಇನ್ನಿತರೆ ಕಾರಣಗಳಿಂದಾಗಿ ಪತ್ನಿಯರನ್ನು ತ್ಯಜಿಸಿರುವ 45 ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ ಪತ್ನಿಯರನ್ನು ತ್ಯಜಿಸಿದ ಎನ್ ಆರ್ ಐ ಗಳ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿರುವುದಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಇಂದು ಹೇಳಿದ್ದಾರೆ.
ಪತ್ನಿಯರನ್ನು ತ್ಯಜಿಸಿರುವ 45 ಎನ್‍ಆರ್‍ಐಗಳ ಪಾಸ್ ಪೋರ್ಟ್‍ಗಳನ್ನು ದೇಶಾಂಗ ವ್ಯವಹಾರಗಳ ಸಚಿವಾಲಯ ರದ್ದುಗೊಳಿಸಿದೆ. ಮದುವೆಯಾಗಿ ನಾಪತ್ತೆಯಾಗಿರುವ ಇತರ ಎನ್‍ಆರ್‍ಐಗಳಿಗೆ ನೋಡಲ್ ಏಜೆನ್ಸಿ ಲುಕ್‍ಔಟ್ ನೋಟಿಸ್‌ಗಳನ್ನು ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೀಗೆ ಎನ್‌ಆರ್‌ಐ ಪತಿಗಳಿಂದ ತ್ಯಜಿಸಲ್ಪಟ್ಟ, ಮೋಸಗೊಂಡ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಲೆಂದು ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಸೂದೆಯೊಂದನ್ನು ಸದನದ ಅಂಗೀಕರಾಕ್ಕೆಂದು ಹಾಕಿದೆ, ಆದರೆ ಅದಕ್ಕೆ ಮೇಲ್ಮನೆಯಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
