ಪ್ರಿಯತಮೆಯನ್ನೇ ಅತ್ಯಾಚಾರ ಮಾಡಿದ ಪ್ರಿಯಕರ…!!!!

ಮುಂಬೈ:

          ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ತಾನು ಪ್ರೀತಿಸಿದ ಯುವತಿಯನ್ನು ಪ್ರಿಯಕರನೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ನಡೆದಿದೆ.

          ಪ್ರಿಯತಮೆಯ ಬರ್ತ್ ಡೇ ಪಾರ್ಟಿಯನ್ನು ಆಕೆಯ ಸ್ನೇಹಿತರು ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಸ್ನೇಹಿತರ ಗೆಳೆಯರು ಕೂಡ ಬಂದಿದ್ದರು.ಈ ಪಾರ್ಟಿಗೆ ಬಂದಿದ್ದ ಆಕೆಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

        ಕಳೆದ ಬುಧವಾರದಂದು ಸಂತ್ರಸ್ತೆಯ ಸ್ನೇಹಿತರು ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಸ್ನೇಹಿತರು, ಅವರ ಗೆಳೆಯರು ಮತ್ತು ಪ್ರಿಯಕರನೂ ಬಂದಿದ್ದನು. ಆದರೆ ಪಾರ್ಟಿಯನ್ನು ಆಯೋಜನೆ ಮಾಡಿದ್ದ ಸ್ನೇಹಿತರು ಬರ್ತ್ ಡೇ ಹುಡುಗಿ ಕುಡಿಯುವ ತಂಪು ಪಾನೀಯದಲ್ಲಿ ಮತ್ತು ಬರುವ ವಸ್ತುವನ್ನು ಬೆರೆಸಿ ಕುಡಿಸಿದ್ದಾರೆ.ಜ್ಯೂಸ್ ಕುಡಿದ ಬಳಿಕ ಪ್ರಜ್ಞೆ ಕಳೆದುಕೊಂಡ ನಂತರ ಆಕೆಯ ಪ್ರಿಯಕರ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

       ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿ ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಸ್ನೇಹಿತರು ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ಈ ಕುರಿತು ವಾಲಿವ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link