ಜೈಪುರ:
ರಾಜಸ್ತಾನದ ಆಡಳಿತ ಪಕ್ಷ ತಮ್ಮ ಪಕ್ಷದ ಆರು ಶಾಸಕರನ್ನು ಕಾಂಗ್ರೆಸ್ ನೊಂದಿಗೆ ವಿಲೀನಗೊಳಿಸಿಕೊಂಡಿರುವ ಸಂಬಂಧ ಬಿಎಸ್ ಪಿ ರಾಜಸ್ತಾನ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ ಚಂದ್ ಖಾರಿಯಾ, ಲಖನ್ ಮೀನಾ, ಜೋಗೇಂದ್ರ ಅಹ್ವಾನ ಮತ್ತು ರಾಜೇಂದ್ರ ಗುದಾ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಪಿ ಟಿಕೆಟ್ ನಿಂದ ಗೆಲುವು ಸಾಧಿಸಿದ್ದರು. ಅವರು ಸೆಪ್ಟೆಂಬರ್ 2019 ರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
ಬಿಎಸ್ ಪಿ ಶಾಸಕರು ಕಾಂಗ್ರೆಸ್ ಜೊತೆ ವಿಲೀನವಾಗಿರುವ ಸಂಬಂಧ ನಾವು ಇಂದು ರಾಜಸ್ತಾನ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ರಾಜಸ್ತಾನ ಬಿಎಸ್ ಪಿ ಅಧ್ಯಕ್ಷ ಬಗ್ವಾನ್ ಸಿಂಗ್ ಬಾಬಾ ಹೇಳಿದ್ದಾರೆ.ಇದರ ಜೊತೆಗೆ ನಾವು ವಿಧಾನಸಭೆ ಸ್ಪೀಕರ್ ಗೂ ವಿಲೀನ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ ಮತ್ತು ವಿಲೀನವನ್ನು ರದ್ದುಗೊಳಿಸಲು ಕೋರಿದ್ದೇವೆ ಎಂದು ಹೇಳಿದ್ದಾರೆ.ತಮ್ಮ ದೂರಿನ ಮೇರೆಗೆ ವಿಧಾನಸಭೆ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದನ್ ದಿಲಾವರ್ ಮಂಗಳವಾರ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ