ಮಾನವೀಯತೆ ಮೆರೆದ ಬಸ್ ಸಿಬ್ಬಂದಿ

0
77

ಮುಂಬೈ:

     ನಮ್ಮ ದೇಶದಲ್ಲಿ ಪದೆ ಪದೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಆಗುವುದನ್ನು ನೋಡುತ್ತಿರುತ್ತೇವೆ. ಇದಕ್ಕೆ ಇಂಬು ಕೊಡುವಂತೆ ಕೆಲ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಕೂಡ ರಾತ್ರಿ ಯುವತಿಯೊಬ್ಬಳೆ ಬಸ್ ಇಳಿದರೆ ತಕ್ಷಣ ಹೊರಟು ಹೋಗುತ್ತಾರೆ. ಆದರೆ ಮುಂಬೈ ನಗರದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಇದಕ್ಕೆ ಭಿನ್ನವಾಗಿ ನಿಲ್ಲುತ್ತಾರೆ ಹೇಗೆಂದರೆ ಯುವತಿಯೊಬ್ಬಳು ಬಸ್ ಇಳಿದು ಮನೆಗೆ ಆಟೋ ಹತ್ತೊವರೆಗೂ ಅಲ್ಲೆ ನಿಂತಿದ್ದು, ಆ ಬಳಿಕ ಹೋಗಿದ್ದಾರೆ ಎಂದು ಅದೇ ಯುವತಿ ಹೇಳಿಕೊಂಡಿದ್ದಾಳೆ.

     ಯುವತಿ ತನಗಾಗಿ ಕಾದಿದ್ದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಬಗ್ಗೆ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. “ಮೊದಲಿಗೆ ಯುವತಿ ಈ ಕಾರಣಕ್ಕೆ ನಾನು ಮುಂಬೈಯನ್ನ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಕೃತಜ್ಞತೆ ತಿಳಿಸಿ ಬರೆದು ಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here