ಆಂಧ್ರಪ್ರದೇಶ 
ನೆರೆಯ ಆಂಧ್ರಪ್ರದೇಶದಲ್ಲಿ ಕಾರು ಚಾಲಕನೊಬ್ಬನಿಗೆ ಟ್ರಾಫಿಕ್ ಪೊಲೀಸ್ ಒಬ್ಬರು ದಂಡ ವಿಧಿಸಿದ್ದಾರೆ .ಸಿಗ್ನಲ್ ಜಂಪ್, ಸೀಟ್ ಬೆಲ್ಟ್, ಓವರ್ ಸ್ಪೀಡ್, ಪಾರ್ಕಿಂಗ್ ಸೇರಿದಂತೆ ಹಲವು ರಸ್ತೆ ನಿಯಮ ಉಲ್ಲಂಘನೆಗೆ ಕಾರು ಚಾಲಕರಿಗೆ ದಂಡ ವಿಧಿಸಿರುವುದು ಸಾಮಾನ್ಯ. ಆದರೆ ಕೆಲವು ಬಾರಿ ಪೊಲೀಸರು ಮಾಡುವ ಸಣ್ಣ ಎಡವಟ್ಟುಗಳಿಂದ ಅರ್ಥವಿಲ್ಲದ ರೀತಿಯಲ್ಲಿ ದಂಡ ವಿಧಿಸಿ ಸುದ್ದಿಯಾಗುತ್ತಾರೆ.
ವೋಕ್ಸ್‌ವ್ಯಾಗನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿ ಸುದ್ದಿಯಾಗಿದ್ದಾರೆ ಆಶ್ಚರ್ಯವೆಂದರೆ ಚಾಲಕನಿಗೆ ಪೊಲೀಸರ ದಂಡ ಏತಕ್ಕಾಗಿ ವಿಧಿಸಿದ್ದಾರೆ ಎಂದೇ ಅರ್ಥವಾಗಿಲ್ಲ. ಕಾರಣ ವೋಕ್ಸ್‌ವ್ಯಾಗನ್ ಜೆಟ್ಟಾ ಕಾರು ಮಾಲೀಕನಿಗೆ ರಸ್ತೆ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಡಿಜಿಟಲ್ ಚಲನ್ ರವಾನೆಯಾಗಿತ್ತು. ಚಲನ್ ನೋಡಿ ಚಾಲಕನಿಗೆ ಅಚ್ಚರಿ ಕಾದಿತ್ತು. ಹೆಲ್ಮೆಟ್ ಹಾಕದ ಕಾರಣ 100 ರೂಪಾಯಿ ದಂಡ ವಿಧಿಸಲಾಗಿತ್ತು.
ಹಲವು ಸಿಗ್ನಲ್ ಹಾಗೂ ರಸ್ತೆಗಳಲ್ಲಿ ಸಿಸಿಟಿ ಅಳವಡಿಸಲಾಗಿದೆ. ಇದರ ಆಧಾರದಲ್ಲಿ ಕಂಟ್ರೋಲ್ ರೂಂನಲ್ಲಿರುವ ಸಿಬ್ಬಂಧಿಗಳು ಇ ಚಲನ್ ಜನರೇಟ್ ಮಾಡಿದ್ದಾರೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ. ಇಷ್ಟೇ ಅಲ್ಲ ವೋಕ್ಸ್‌ವ್ಯಾಗನ್ ಕಾರಿನ ನಂಬರ್ ಚೆಕ್ ಮಾಡಿದಾಗ ರಾಂಗ್ ಪಾರ್ಕಿಂಗ್ ವೇಳೆ ನಿಲ್ಲಿಸಿದ ಕಾರಣ ಕಾರಿಗೆ ದಂಡ ವಿಧಿಸಲಾಗಿದೆ. ಆದರೆ ಇ ಚಲನ್ನಲ್ಲಿ ಹೆಲ್ಮೆಟ್ ಹಾಕದ ಕಾರಣ ಎಂದು ತಪ್ಪಾಗಿ ಮುದ್ರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ, ರಾಂಗ್ ಪಾರ್ಕಿಂಗ್ ದಂಡ ಕಟ್ಟುವಂತೆ ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








