ಮುಂಬೈ:
ಬಿಜೆಪಿಯೇತರ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿ ರಚನೆಯಾಗಲಿದ್ದು ಪೂರ್ಣಾವಧಿ ಪೂರೈಸಲಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಮದ್ಯಂತರ ಚುನಾವಣೆ ಬರುವ ಮಾತೇಯಿಲ್ಲಾ ಎಂದ ಶರದ್ ಪವಾರ್. ರಾಜ್ಯದ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರ ರಚಿಸುವುದು ಮೂರೂ ಪಕ್ಷಗಳ ಗುರಿಯಾಗಿದೆ ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯಿಲ್ಲ.ಇನ್ನೊಂದೆಡೆ ಎನ್ ಸಿಪಿ ನಾಯಕ ನವಾಬ್ ಮಲಿಕ್, ಬಿಜೆಪಿಯೇತರ ಸರ್ಕಾರ ರಚನೆಗೆ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮಧ್ಯೆ ಮಾತುಕತೆಗಳು ಮುಂದುವರಿದಿದ್ದು ಶಿವಸೇನೆಯಿಂದಲೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಶಿವಸೇನೆಯ ನಾಯಕರು ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಹಲವು ಬಾರಿ ಕೇಳುತ್ತೀರಾ, ಸಿಎಂ ಹುದ್ದೆ ವಿಚಾರವಾಗಿಯಲ್ಲವೇ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ವಾದ ವಿವಾದ ಉಂಟಾಗಿ ಮೈತ್ರಿ ಮುರಿದುಬಿದ್ದಿದ್ದು. ಹೀಗಾಗಿ ಸಿಎಂ ಹುದ್ದೆ ಶಿವಸೇನೆಗೆ ಅದರಲ್ಲಿ ಬದಲಾವಣೆಯಿಲ್ಲ. ಶಿವಸೇನೆಗೆ ಬಿಜೆಪಿ ಅಪಮಾನ ಮಾಡಿದೆ ಇದರಿಂದ ಶಿವಸೇನೆಯ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮಲಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ