ಬೆಂಗಳೂರು :
ಬೆಂಗಳೂರಿನ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ನಿತ್ಯ ಸಾವಿರಾರು ಜನರಿಗೆ ಸಾರಿಗೆ ಸೇವೆ ಒದಗಿಸಬಲ್ಲ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ಮತ್ತೆ ವಿಳಂಬವಾಗಲಿದೆ. ಯೋಜನೆ ಪೂರ್ಣಗೊಂಡು ವರ್ಷ ಉರುಳಿದರೂ ಸಂಚಾರ ಆರಂಭಿಸಿದ ಈ ಬಹುನಿರೀಕ್ಷೆಯ ಮಾರ್ಗದಲ್ಲಿ ರೈಲುಗಳು ಯಾವಾಗ ಓಡತ್ತವೆಯೋ ಎಂದು ಪ್ರಯಾಣಿಕರು ಕಾಯುತ್ತಿದ್ದಾರೆ. ಈಗಾಗಲೇ ಕೆಲ ಬಾರಿ ಪ್ರಯಾಣಿಕರ ಆಸೆ ಹುಸಿಯಾಗಿಸಿ, ಕಾರ್ಯಾಚರಣೆಗೆ ವಿಳಂಬ ಮಾಡುತ್ತಿರುವ BMRCL ವಿರುದ್ಧ ಜನರ ಆಕ್ರೋಶ ಹೊರ ಹಾಕಿದ್ದಾರೆ.
ಚಾಲಕ ರಹಿತ ರೈಲುಗಳು ಹಳದಿ ಮಾರ್ಗದಲ್ಲಿ ಓಡಲಿವೆ. ಆದರೆ ಬೆಂಗಳೂರಿಗೆ ಬರಬೇಕಾಗಿದ್ದ ಡ್ರೈವರ್‌ಲೆಸ್ ರೈಲು ಸೆಟ್‌ಗಳು ಬರುವುದು ತಡವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಚೀನಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಂತೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಟಿಟಾಗಾರ್ ರೈಲ್ ಸಿಸ್ಟಿಮ್ ತಯಾರಿಸಿದ ದೇಶಿ ಡ್ರೈವರ್‌ಲೆಸ್ ರೈಲನ್ನು ಜನವರಿ 06 ರಂದು ರವಾನಿಸಲಾಗಿದೆ.
ಈ ರೈಲು ಸೆಟ್ ಜನವರಿ ಅಂತ್ಯಕ್ಕೆ ಕೊಲ್ಕತ್ತಾದಿಂದ ಬರಬೇಕಿತ್ತು, ಆದರೆ ವಿಳಂಭವಾಗಿದೆ. ಇನ್ನೊಂದು ವಾರದೊಳಗೆ (ಫೆಬ್ರವರಿ 10ರ ಒಳಗೆ) ಬೆಂಗಳೂರಿಗೆ ಬರಲಿದೆ. ಅದು ಬಂದ ಬಳಿಕ ಸುಮಾರು 20 ದಿನಗಳ ಆ ರೈಲಿ ಪರೀಕ್ಷೆ, ಸಿಗ್ನಲ್ ಟೆಸ್ಟ್‌ನಂತರ ಅನೇಕ ಪರೀಕ್ಷೆಗಳು ನಡೆಬೇಕು. ಬಳಿಕವೇ ಈ ಮಾರ್ಗ ಕಾರ್ಯಾಚರಣೆ ಬಗ್ಗೆ BMRCL ನಿರ್ಧಾರ ಕೈಗೊಳ್ಳಲಿದೆ
ಸದ್ಯದ ಪರಿಸ್ಥಿತಿ ನೋಡಿದರೆ, ಒಂದೂವರೆ ದಶಕದಿಂದ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಆದರೆ ರೈಲುಗಳು ಅಷ್ಟೇ ಇವೆ. ಇದೀಗ ಹೊಸ ಮಾರ್ಗಕ್ಕೆ ಬೇಕಾದ ರೈಲುಗಳು ಇಲ್ಲದ ಕಾರಣ, ಹಳದಿ ಮಾರ್ಗದಲ್ಲಿ ಅತೀ ಕನಿಷ್ಠ ರೈಲುಗಳಿಂದ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಗಳು ಇವೆ.
ಫೆಬ್ರವರಿ ಪೂರ್ತಿ ತಿಂಗಳಲ್ಲಿ ಕೆಲವು ದಿನ ಮೆಟ್ರೋ ರೈಲನ್ನು ಹಳಿಗೆ ಜೋಡಿಸುವುದು, ಸಂಚಾರ ತಪಾಸಣೆ, ಪ್ರಯಾಣಿಕರ ಸುರಕ್ಷತೆ, ಸಾಮರ್ಥ್ಯ, ಸಿಗ್ನಲ್ ಆಧಾರಿತ ಸಂಚಾರ ಹೀಗೆ ವಿವಿಧ ಪರೀಕ್ಷೆ ನಡೆಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಯೆಲ್ಲೋ ಲೈನ್ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.
ಒಂದು ವೇಳೆ ಹಳದಿ ಮಾರ್ಗದಲ್ಲಿ ನಿರೀಕ್ಷೆಯಂತೆ ಮೆಟ್ರೋ ಪ್ರಯಾಣ ಆರಂಭವಾದರೂ ಸಹಿತ ಹೆಚ್ಚ ರೈಲುಗಳು ಬರುವವರೆಗೂ ಅರ್ಧ ಗಂಟೆಗೆ ಒಂದು ರೈಲು ಸಂಚಾರ ನಡೆಸಲು ತಿರ್ಮಾನಿಸಲಾಗಿದೆ. ಇದು ಡ್ರೈವರ್‌ಲೆಸ್ ಟ್ರೈನ್ ಆದರೂ ಸಹಿತ, ಚಾಲಕರಿಂದಲೇ ಓಡಿಸಲು ಈಗಾಗಲೇ BMRCL ತಿರ್ಮಾನಿಸಿದೆ.
ಬೆಂಗಳೂರು ಹೃದಯಭಾಗದಿಂದ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರವರೆಗೆ ಹತ್ತಾರು ಬಡಾವಣೆ ದಾಟಿಕೊಂಡು ನಗರದ ಹೊರವಲಯಕ್ಕೆ ಸಂಪರ್ಕಿಸುತ್ತದೆ. ಐಟಿ ಕಾರಿಡಾರ್ ಭಾಗವಾದ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಜನರಿಗೆ ಈ ಹಳದಿ ಮಾರ್ಗ ನಿರ್ಣಾಯಕವಾಗಿದೆ. ಹೀಗಾಗಿ ಲಕ್ಷಗಟ್ಟಲೇ ಪ್ರಯಾಣಿಕರು ಈ ಮೆಟ್ರೋ ಮಾರ್ಗದ ಆರಂಭಕ್ಕಾಗಿ ಕಾಯುತ್ತಿದ್ದಾರೆ.
