ಬಲವಂತದಿಂದ ಮತಾಂತರ ಮಾಡಿದರೆ ಕಠಿಣ ಶಿಕ್ಷೆ: ರಾಜನಾಥ್ ಸಿಂಗ್

ಹೊಸದಿಲ್ಲಿ:

    ದೇಶದಲ್ಲಿ ಸದ್ಯ ಪ್ರಚಲಿತವಾಆಗಿರುವ ಸಾಮೂಹಿಕ ಮತಾಂತರ ಭಾರತದ ಮಟ್ಟಿಗ ವಿಷಾದನೀಯ ವಿಚಾರ. ಅಲ್ಲದೆ ಈ ಕುರಿತು ಪರಿಶೀಲನೆ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

     ಕ್ರೈಸ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್‌, ”ನೀವು ಹಿಂದೂ ಆಗಿದ್ದರೆ ಹಿಂದೂ ಆಗಿಯೇ ಇರಿ. ಮುಸ್ಲಿಂ ಆಗಿದ್ದರೆ ಮುಸ್ಲಿಂ ಆಗಿಯೇ ಇರಿ. ಕ್ರಿಶ್ಚಿಯನ್‌ ಆಗಿದ್ದರೆ ಕ್ರಿಶ್ಚಿಯನ್‌ ಆಗಿಯೇ ಇರಿ. ನೀವು ಇಡೀ ಪ್ರಪಂಚವನ್ನೇ ಪರಿವರ್ತನೆ ಮಾಡಲು ಏಕೆ ಬಯಸುತ್ತೀರಿ?. ಯಾರಾದರು ಸ್ವ ಇಚ್ಚೆಯಿಂದ ಬೇರೊಂದು ಧರ್ಮವನ್ನು ಸ್ವೀಕರಿಸಲು ಬಯಸಿದರೆ, ಅವರು ಅದನ್ನು ಮಾಡಬೇಕು.

    ಇದಕ್ಕೆ ಯಾವುದೇ ಆಕ್ಷೇಪಣೆ ಇರಬಾರದು. ಆದರೆ ಸಾಮೂಹಿಕ ಮತಪರಿವರ್ತನೆ ನಡೆಯುತ್ತಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ಬದಲಿಸಲು ಪ್ರಾರಂಭಿಸಿದರೆ, ಅದು ಯಾವುದೇ ದೇಶಕ್ಕಾದರೂ ಅಪಾಯಕಾರಿ ಯಾಗಿರುತ್ತದೇ  ಎಂದು ತಿಳಿಸಿದ್ದಾರೆ. ಬಲವಂತದ ಮತಾಂತರ ಶಿಕ್ಷಾರ್ಹ ಅಫರಾಧ ವಾಗಿರುತ್ತದೆ ಎಂದು ತಿಳಿಸಿದ್ದಾರೆ .

Recent Articles

spot_img

Related Stories

Share via
Copy link