ನವದೆಹಲಿ
ಭಾರತದ ಮಿತ್ರರಾಷ್ಟ್ರ ಎಂದೇ ಖ್ಯಾತಿ ಪಡೆದಿರುವ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅ.04ರಂದು ಭಾರತಕ್ಕೆ ಆಗಮಿಸುತ್ತಿದ್ದು ವಿವಿಧ ವಿಚಾರಗಳ ಕುರಿತು ಪ್ರಧಾನಿ ಮೋದಿಯೊಂದಿಗೆ ಸುದೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ . 19ನೇ ಇಂಡೋ-ರಷ್ಯನ್ ಶೃಂಗಸಭೆ ಹಿನ್ನಲೆಯಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಕಳೆದ ಬಾರಿಯ ಶೃಂಗಸಭೆ 2017ರಲ್ಲಿ ಸೆಂಟ್ ಪೀಟರ್ ಬರ್ಗ್ ನಲ್ಲಿ ನಡೆದಿತ್ತು.
ಕಳೆದ ಮೇ ತಿಂಗಳಿನಲ್ಲಿ ಮೋದಿ ಹಾಗೂ ಪುಟಿನ್ ಅವರು ಸೋಚಿಯಲ್ಲಿ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದರು. ಇಂದು ಭಾರತಕ್ಕೆ ಆಗಮಿಸಲಿರುವ ರಷ್ಯಾ ಅಧ್ಯಕ್ಷರು ಆಗಮಿಸುತ್ತಿರುವ ಬೆನ್ನಲ್ಲೇ ಅಮೆರಿಕಾದಿಂದ ಎಲ್ಲಿ ನಿರ್ಬಂಧ ಹೇರಿಕೆಯಾಗುವುದೊ ಎಂಬ ಆತಂಕದ ನಡುವೆ ರಷ್ಯಾದಿಂದ ಖರೀಧಿಸಲು ಇಚ್ಚಿಸಿರುವ ಆತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400ಗೆ ಸಂಪುಟ ಸಮಿತಿ ಒಪ್ಪಿದೆ ನೀಡಿದೆ.
ಸಂಪುಟ ಸಮಿತಿ ಒಪ್ಪಿಗೆ ನೀಡಿರುವುದರಿಂದ ಎಸ್-400 ಖರೀದಿ ಮಾಡುವ ಕುರಿತ ಒಪ್ಪಂದಕ್ಕೆ ಹಸಿರು ನಿಶಾನೆ ತೊರಿದಂತಾಗಿದೆ ಇನ್ನು ಸಹಿ ಹಾಕಿದ ಮುಂದಿನ 24 ತಿಂಗಳ ಬಳಿಕ ಮೊದಲ ಎಸ್-400 ಭಾರತಕ್ಕೆ ಆಗಮಿಸಲಿದೆ. ಇನ್ನುಳಿದ ವಾಯು ರಕ್ಷಣಾ ಕ್ಷಿಪಣಿಗಳು ಮುಂದಿನ 4-5 ವರ್ಷಗಳ ಬಳಿಕ ಭಾರತವನ್ನು ತಲುಪಲಿವೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
