ಪಿಎಂಸಿ ಬಿಕ್ಕಟು : ಆರ್ ಬಿಐ ಗವರ್ನರ್ ಜತೆ ನಿರ್ಮಲಾ ಸೀತರಾಮನ ಭೇಟಿ..!

ಮುಂಬೈ:

   ದೇಶದಲ್ಲಿ ಆರ್ಥಿಕ ಹಿಂಜರಿತ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಗ್ರಾಹಕರಿಗೆ ಉಂಡೆನಾಮ ಹಾಕುವ ಬ್ಯಾಂಕುಗಳು ಇನ್ನೊಂದು ಕಡೆ ಇಂತಹ ಪರಿಸ್ಥತಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಿಎಂಸಿ ಬ್ಯಾಂಕ್ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣಗಳು ಕಾಣುವುದು ಅಸಾಧ್ಯ ಎನ್ನಲಾಗುತ್ತಿದೆ.

   ಮುಂಬೈನ ಬಿಜೆಪಿ ಕಚೇರಿ ಮುಂದೆ ಜಮಾಸಿದ್ದ ಪಿಎಂಸಿ ಬ್ಯಾಂಕ್ ಠೇವಣಿದಾರರನ್ನು ಭೇಟಿ ಮಾಡಿ ಅವರೊಡನೆ ಮಾತನಾಡಿದ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮಾನ್ ಅವರು ದೇಶದ ಗ್ರಾಹಕರ ಹಿತ ಕಾಪಾಡಲು ಕಾನೂನಾತ್ಮಕ ಬದಲಾವಣೆ ತರುವುದಾಗಿ ತಿಳಿಸಿದ್ದಾರೆ.

  ಹಣಕಾಸು ಸಚಿವಾಲಯ ಹಾಗೂ ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಆರ್ ಬಿಐ ಡೆಪ್ಯೂಟಿ ಗವರ್ನರ್ ಅವರನ್ನು ಭೇಟಿ ಮಾಡಿ  ಬಹು – ರಾಜ್ಯ ಸಹಕಾರಿ ಬ್ಯಾಂಕ್ ಗಳ ಕಾರ್ಯನಿರ್ವಹಣೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಕಾನೂನು ತಿದ್ದುಪಡಿಯ ಅಗತ್ಯ ಇದೆಯೇ ಎಂಬುದರ ವಿಚಾರವಾಗಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನು ಈ ಸಂಬಂಧ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಚರ್ಚಿಸಿ ತುರ್ತು ಸಂಕಟವನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link