ಬುಲಂದ್ ಶಹರ್:
ದೇಶದ ರಾಜಕೀಯದ ಟ್ರಂಪ್ ಕಾರ್ಡ್ ಆಗಿ ಪರಿವರ್ತನೆಯಾಗಿದ್ದ ಗೋವು ಹಿಂಸಾಚಾರ ಪ್ರಕರಣದ ಶಂಕಿತ ಅಪರಾಧಿಯಾಗಿರುವ ಸೈನಿಕನನ್ನು ಸೇನೆ ಪೊಲೀಸರಿಗೆ ಹಸ್ತಾಂತರಿಸಿದ್ದು ಸುಬೋಧ್ ಕುಮಾರ್ ಸಿಂಗ್ ಮತ್ತು ಯುವಕ ಸುಮಿತ್ ಹತ್ಯೆ ಪ್ರಕರಣದಲ್ಲಿ ಈತನನ್ನು ಉತ್ತರಪ್ರದೇಶದ ಎಸ್ಟಿಎಫ್ ಶನಿವಾರ ರಾತ್ರಿ ಬಂಧಿಸಿದೆ.
ಈ ಬಂಧನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಎಸ್ಟಿಎಫ್ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಹೇಳುವಂತೆ ‘ಜಿತು ಫೌಜಿಯನ್ನು ನಾವು ಬಂಧಿಸಿದ್ದು. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿದೆ. ಪ್ರಸ್ತುತ ಮೊದಲ ಹಂತದ ತನಿಖೆ ಮುಗಿದಿದ್ದು. ಅವರನ್ನು ಬುಲಂದ್ ಶಹರ್ ಗೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು’ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.