ವಿಶಾಖಪಟ್ಟಣಂ:
ಅಮರಾವತಿ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿರಬಹುದು ಆದರೆ ಪ್ರವಾಹವಾದ ಬಳಿಕ ನಡೆದ ಬೆಳವಣಿಗೆ ಗಮನಿಸಿದರೆ ಒಂದು ರಾಜಧಾನಿ ಎಂದರೆ ಎಲ್ಲಾ ರೀತಿಯ ಪ್ರಾಕೃತಿಕ ತಲ್ಲಣಗಳಿಂದ ಸುರಕ್ಷಿತವಾಗಿರಬೇಕು ಆದರೆ ಅಮರಾವತಿ ನಗರವು ಯಾವುದೇ ರೀತಿಯಲ್ಲು ಸುರಕ್ಷಿತವಾಗಿಲ್ಲ ಮತ್ತು ಜನವಾಸ ಯೋಗ್ಯವಾದುದಲ್ಲ ಎಂದು ನಗರಾಭಿವೃದ್ಧಿ ಸಚಿವ ಬೋಟ್ಸಾ ಸತ್ಯನಾರಾಯಣ ತಿಳಿಸಿದ್ದಾರೆ.
ಸರ್ಕಾರವು ಪ್ರವಾಹ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ ಸಚಿವರು , ರಾಜಧಾನಿಯಾದ ಅಮರಾವತಿ ಕೃಷ್ಣಾ ನದಿ ಪ್ರವಾಹದಲ್ಲಿ ಅರ್ಧ ನಗರವೇ ಮುಳುಗಿದೆ ಮತ್ತು ಟಿಡಿಪಿ ನಾಯಕರ ಮನೆಯೂ ಸಹ ಪ್ರವಾಹದಿಂದ ಜಲಾವೃತವಾಗಿದೆ .ಇನ್ನು ಅಮರಾತಿಯಲ್ಲಿ ಹೆಚ್ಚುತ್ತಿರುವ ನಿರ್ಮಾಣ ವೆಚ್ಚಗಳು ಯೋಜನೆಯ ಮುಗಿಯಲು ಅಡ್ಡಿಯಾಗಿವೆ ಎಂದು ತಿಳಿಸಿದ್ದಾರೆ ಮತ್ತು ಸರ್ಕಾರ ನೇಮಿಸಿದ್ದ ಶಿವರಾಮಕೃಷ್ಣ ಸಮಿತಿ ತನ್ನ ವರದಿಯಲ್ಲಿ ಅಮರಾವತಿಯು ಯಾವ ರೀತಿಯಲ್ಲಿಯೂ ರಾಜಧಾನಿಯಾಗಲು ಯೋಗ್ಯವಲ್ಲ ಎಂದು ತಿಳಿಸಿದೆ ಇದಕ್ಕೆ ಕಾರಣವಾಗಿ ಅವರು ಕೃಷ್ಣಾ ನದಿ ನೀರು ಹೆಚ್ಚಾಗಿ ಬಂದರೆ ಈ ಪ್ರಾಂತ್ಯ ಸಂಪೂರ್ಣ ಜಲಾವೃತವಾಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಾರೆ ಎಂದಿದೆ.
ನಂತರದಲ್ಲಿ ಅಮರಾವತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿದ್ದ ಹಣವನ್ನು ಹಿಂದಿನ ಸರ್ಕಾರ ದುರುಪಯೋಗ ಪಡಿಸಿಕೊಂಡಿದ್ದು ಸ್ವಲಾಭಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಆಪಾದಿಸಿದ್ದಾರೆ, ಮತ್ತು ಅಮರಾವತಿಯಲ್ಲಿ ಒಂದು ಲಕ್ಷ ಬಂಡವಾಳ ಹೂಡಿಕೆ ಮಾಡಿದರೆ ಅದನ್ನು ಅಭಿವೃದ್ಧಿ ಮಾಡಲು ಸುಮಾರು ದುಪ್ಪಟು ಹಣ ಖರ್ಚಾಗುತ್ತದೆ ಯಾರಾದರು ಲಾಭವನ್ನು ನಿರೀಕ್ಷಿಸುತ್ತಾರೆಯೇ ಹೊರತು ನಷ್ಟವನ್ನಲ್ಲ ಎಂದು ನಾಯ್ಡು ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ