ಟಿಡಿಬಿ ಸ್ವಾಧೀಕ್ಕೆ ಮುಂದಾದ ಕೇರಳ ಸರ್ಕಾರ..!

ತಿರುವನಂತಪುರ :

    ಕೇರಳದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕಾಗಿಯೇ ಬೇರೆ ಒಂದು ಕಾನೂನು ತರಲು ಕೇರಳ ಸರ್ಕಾರ ಮುಂದಾಗಿದೆ .

    ಸದ್ಯ ಪಂದಳ ರಾಜ ಕುಟುಂಬದ ಮೇಲ್ವಿಚಾರಣೆಯಲ್ಲಿರುವ ಶಬರಿಮಲೆಯನ್ನು ಮತ್ತು ಟ್ರಾವೆಂಕೂರ್ ದೇವಸ್ಥಾನಂ ಟ್ರಸ್ಟ್ ಅನ್ನು ಸರ್ಕಾರದ ಅಧೀನದಲ್ಲಿ ತರಲು ನಿರ್ಣಿಯಿಸಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.ನ್ಯಾಯಮೂರ್ತಿ ಎಂ.ವಿ.ರೇಮನಾ ನೇತೃತ್ವದ ತ್ರಿ ಸದಸ್ಯ ಪೀಠವು ದೇವಾಲಯಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಪಂದಳ ರಾಜ ಕುಟುಂಬದ ಸದಸ್ಯರ ಮನವಿಯನ್ನು ವಿಚಾರಣೆ ನಡೆಸುವಾಗ ಸರ್ಕಾರ ಈ ಪ್ರಸ್ತಾವವನನ್ನು ನ್ಯಾಯಾಲಯದ ಮುಂದಿರಿಸಿದೆ ಎಂದು ತಿಳಿದು ಬಂದಿದೆ ಮತ್ತು ಅರ್ಜಿಯ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ಕೇರಳ ಸರ್ಕಾರದ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

   ಇಂಡಿಯನ್ ಎಕ್ಸ್‌ಪ್ರೆಸ್‌ ಗೆ  ದೊರೆತಿರುವ ಮಾಹಿತಿ ಪ್ರಕಾರ ಸರ್ಕಾರ ಹೊಸ ನೀತಿಯ ಹೆಸರಿನಲ್ಲಿ ದೇವಸ್ಥಾನಗಳ ಮೂಲಭೂತ ಹಕ್ಕುಗಳನ್ನು ಕಸಿಯಲು ಮುಂದಾಗಿದೆ ಎಂದು ದೇವಸ್ಥಾನದ ತಂತ್ರಿಗಳು ತಿಳಿಸಿದ್ದಾರೆ.ಈ ವಿಷಯವಾಗಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಟಿಡಿಬಿ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್,ಸರ್ಕಾರದ ಈ ಕ್ರಮವು ದೇವಾಲಯಗಳ ಮತ್ತು ಅದರ ಆದಾಯದ ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ಒಂದು ಭಾಗ ಎಂದು ಹೇಳಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ