ಸಂಜೆ 6:45ಕ್ಕೆ ಮಕರ ಜ್ಯೋತಿ ದರ್ಶನ..!

ಶಬರಿಮಲೆ:

ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಅಂತಿಮ ಘಟ್ಟ ತಲುಪಿದ್ದು, ಜನವರಿ 15ರ ಬುಧವಾರ ಸಂಜೆ 6.45ಕ್ಕೆ ಮಕರಜ್ಯೋತಿ ದರ್ಶನವಾಗಲಿದೆ.

ಪೊನ್ನಂಬಳಮೇಡಂ ಬೆಟ್ಟದಲ್ಲಿ ನಾಳೆ ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆಗಳನ್ನು ನಡೆಸಲಾಗಿದೆ.

ಮಂಗಳವಾರ ಪಂಪ ವಿಳಕ್ಕು ಹಾಗೂ ಪಂಪಸಧ್ಯ ಪೂಜಗಳು ನಡೆಯಲಿದೆ. ಮಂಗಳವಾರ ತಡರಾತ್ರಿ 2 ಗಂಟೆಯಿಂದ ಮಕರ ಸಂಕ್ರಮಣ ಪೂಜೆಗಳು ನಡೆಯಲಿದ್ದು, ಬುಧವಾರ ಸಂಜೆ 6.45ರ ವೇಳಗೆ ಪೊನ್ನಂಬಳಮೇಡುವಿನಲ್ಲಿ ಪವಿತ್ರ ಮಕರ ಜ್ಯೋತಿಯ ದರ್ಶನವಾಗಲಿದೆ.

ಜನವರಿ 16ರಿಂದ 20ರವರೆಗೆ ಸಾರ್ವಜನಿಕ ದರ್ಶನಕ್ಕೆ ದೇಗುಲ ತೆರೆದಿರಲಿದ್ದು, ಜನವರಿ 21 ರಂದು ಪಂದಳ ರಾಜ ಮನೆತನದ ಪೂಜಾ ಕಾರ್ಯಗಳು ಅಂತಿಮಗೊಂಡ ಬಳಿಕ ದೇಗುಲದ ಬಾಗಿಲು ಮುಚ್ಚಲಿದೆ ಎಂದು ವರದಿಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap