ನವದೆಹಲಿ:
ಡ್ಯೂಪ್ಲಿಕೆಟ್ ಡೈಮಂಡ್ ಗಳ ರಾಜ ಎಂದೇ ಕುಖ್ಯಾತನಾಗಿರುವ ನೀರವ್ ಮೋದಿ ನಿರ್ಮಿಸಿದ್ದ 100 ಕೋಟಿ ಮೌಲ್ಯದ ಬಂಗಲೆಯನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದೆ.
#WATCH Maharashtra: PNB Scam accused Nirav Modi's bungalow in Alibag, Raigad district demolished by authorities. pic.twitter.com/ngrJstNjoa
— ANI (@ANI) March 8, 2019
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಳೆದ 6 ದಿನಗಳಿಂದ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಅಡಿಯಲ್ಲಿ ಸ್ಫೋಟಕಗಳನ್ನು ಇರಿಸಿ ಧ್ವಂಸಗೊಳಿಸಲಾಗಿದೆ. ಯಂತ್ರಗಳನ್ನು ಬಳಸಿ ಬಂಗಲೆಯನ್ನ ಧ್ವಂಸ ಮಾಡಲು ಪ್ರತ್ನಿಸಿದ್ದರೂ, ವಿಫಲವಾದ ಕಾರಣದಿಂದ ಸ್ಫೋಟಕಗಳ ಬಳಕೆಗೆ ಅನುಮತಿ ಪಡೆಯಲಾಗಿತ್ತು.
ಸುಮಾರು 33,000 ಅಡಿಯಲ್ಲಿ ‘ರೂಪಾನ್ಯ’ ಎಂಬ ಹೆಸರಿನೊಂದಿಗೆ ಮನೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಈ ವೇಳೆ ಕರವಾಳಿ ಪ್ರದೇಶದ ಪರಿಸರದ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
