ಮೀರತ್
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗ್ಯಾಂಗ್’ಸ್ಟರ್ ಒಬ್ಬ ಅತ್ಯಂತ ಚಾಣಾಕ್ಷಣದಿಂದ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
1996 ರಲ್ಲಿ ವಕೀಲರೊಬ್ಬರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬದ್ದಾನ್ ಸಿಂಗ್ ಎಂಬ ಖೈದಿ ಪೊಲೀಸರಿಗೆ ಎಣ್ಣೆ ಪಾರ್ಟಿ ಕೊಡಿಸುವುದಾಗಿ ಹೇಳಿ ಅವರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ. ಮತ್ತೊಂದು ಪ್ರಕರಣದ ವಿಚಾರಣೆಗಾಗಿ ಗಜಿಯಾಬಾದ್ ಗೆ ಕರೆದೊಯ್ಯುತ್ತಿದ್ದ ವೇಳೆ ಮೀರತ್ ನ ಹೋಟೆಲೊಂದರಲ್ಲಿ ಎಣ್ಣೆ ಪಾರ್ಟಿ ಏರ್ಪಾಡು ಮಾಡಿರುವುದಾಗಿ ತನ್ನ ಭದ್ರತೆಗಾಗಿ ಬಂದಿದ್ದ ಪೊಲೀಸರಿಗೆ ನಂಬಿಸಿದ್ದ.
ಅವನ ಮಾತು ಕೇಳಿ ಹೋಟೆಲ್ ನಲ್ಲಿ ಕಂಠ ಪೂರ್ತಿ ಕುಡಿದು ಪೊಲೀಸರು ಮದ್ಯದ ನಿಶೆಯಲ್ಲಿದ್ದರೆ, ಇತ್ತ ಬದ್ದಾನ್ ತನ್ನ ಸಹಚರರೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೆಲಸದಲ್ಲಿ ನಿರ್ಲಕ್ಷ್ಯವಹಿಸಿದ 7 ಪೊಲೀಸರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರಲ್ಲಿ ಒಬ್ಬ ಇನ್ಸ್’ಪೆಕ್ಟರ್ ಕೂಡಾ ಸೇರಿದ್ದಾರೆ.