ಜನವರಿಯಿಂದ ಪರಿಷ್ಕೃತ ಜಿಎಸ್ ಟಿ ಜಾರಿ: ಅರುಣ್ ಜೇಟ್ಲಿ

ನವದೆಹಲಿ: 

     ಆರ್ಥಿಕ ಸಂಚಲನಕ್ಕೆ ಕಾರಣವಾಗಿರುವಂತಹ ಜಿ ಎಸ್ ಟಿ ದಾರಣೆಯಲ್ಲಿ ಕೇಂದ್ರ ಸರ್ಕಾರವೂ ಗಣನೀಯ ಬದಲಾವಣೆಗಳನ್ನು ತಂದಿದ್ದು ಜನತೆಯ ಮೇಲೆ ಇರುವಂತಹ ಭಾರವನ್ನು ಇಳಿಸುವ ಸಲುವಾಗಿ ಜಿ ಎಸ್  ಟಿ ಯನ್ನು ಪರಿಷ್ಕರಣೆ ಮಾಡುವ ಮೂಲಕ ಹೊಸ ದರ ಬಿಡುಗಡೆ ಮಾಡಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ 

        ಅವರ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲ ವಸ್ತುಗಳನ್ನು ಶೇ. 18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಈ ಪರಿಷ್ಕರಣೆಯಿಂದಾಗಿ ಎಲೆಕ್ಟ್ರಾನಿಕ್ಸ್ , ಸಿನಿಮಾ ಟಿಕೆಟ್ ಇನ್ನೂ ಮುಂತಾದ ವಸ್ತುಗಳ ಬೆಲೆ  ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.

        ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ , ಈಗ 34 ಐಷರಾಮಿ ವಸ್ತುಗಳಿಗೆ ಮಾತ್ರ ಶೇ. 28 ತೆರಿಗೆ ವಿಧಿಸಲಾಗಿದ್ದು, ಇನ್ನೂ ಮಧ್ಯಮ ವರ್ಗದವರು ಬಳಸುವ ಎಕಾನಾಮಿ ದರ್ಜಿಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್ ಟಿಯನ್ನು ಶೇ. 5 ಹಾಗೂ ಬ್ಯೂಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ, 12 ರಷ್ಟು ಕಡಿಮೆ ಮಾಡದ್ದೇವೆ ಎಂದು ತಿಳಿಸಿದ್ದಾರೆ .

        100ರೂ. ವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 18 ರಿಂದ  ಶೇ.12ಕ್ಕೆ ಇಳಿಕೆ ಮಾಡಲಾಗಿದೆ.  ಆರಂಭದಲ್ಲಿ  100 ರೂ. ವರೆಗಿನ ಸಿನಿಮಾ ಟಿಕೆಟ್ ಮೇಲೆ   ಶೇ,. 28 ರಷ್ಟು, ತದನಂತರ ಶೇ. 18 ರಷ್ಟು ತೆರಿಗೆ ವಿಧಿಸಲಾಗುತಿತ್ತು ಎಂದರು.ಮಾನಿಟರ್ ,  ಟಿವಿ,  ಪವರ್ ಬ್ಯಾಂಕ್  ಮತ್ತಿತರ ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ದಿವ್ಯಾಂಗರು ಬಳಸುವ ವಸ್ತುಗಳ ಮೇಲೆ ಶೇ, 5ರಷ್ಟು ಇಳಿಸಲಾಗಿದ್ದು.

      ಇನ್ನು ಬಡವರ ಪಾಲಿಗೆ ಸಂಜೀವಿನಿಯಾಗಿರುವ ಜನ್ ಧನ್ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಬ್ಯಾಂಕುಗಳಿಗೆ  ಜಿಎಸ್ ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಮತ್ತು ಪರಿಷ್ಕೃತ ಜಿ ಎಸ್ ಟಿ ದರಗಳು  ಜನವರಿ 1. 2019ರಿಂದ  ಜಾರಿಗೆ ಬರಲಿವೆ ಎಂದು ಜೇಟ್ಲಿ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link