ಡಾಲರ್ ಎದುರು ಐತಿಹಾಸಿಕ ಕುಸಿತ ಕಂಡ ರೂಪಾಯಿ.!

ಮುಂಬೈ:

    ದೇಶಿ ಮಾರುಕಟ್ಟೆಯಲ್ಲಿನ ವಿದೇಶಿ ಹೂಡಿಗಳ ಹೊರಹರಿವು ಮತ್ತು ಇಕ್ವಿಟಿ ಮಾರುಕಟ್ಟೆಯಲ್ಲಿನ ನಷ್ಟದಿಂದಾಗಿ ದಿನದ ಆರಂಭದಲ್ಲಿಯೇ ಡಾಲರ್ ಎದಿರು ರೂಪಾಯಿ ಇಂದು 72 ರೂಗಳಿಗೆ ಕುಸಿದಿದೆ.ಆರಂಭಿಕವಾಗಿ ಡಾಲರ್ ಎದುರು ರುಪಾಯಿ 22 ಪೈಸೆ ಕುಸಿದು ಒಂಬತ್ತು ತಿಂಗಳ ಕನಿಷ್ಠ 72.03 ಕ್ಕೆ ಇಳಿಯಿತು.ಇನ್ನೂ ಮಾರುಕಟ್ಟೆ ಏರಿಳಿತದಿಂದ ಡಾಲರ್ ಎದುರು ರೂಪಾಯಿ 71.93 ರಿಂದ 72.05 ರವರೆಗೆ ವಹಿವಾಟು ನಡೆಸಿದೆ ಎಂದು ತಿಳಿದು ಬಂದಿದೆ.

     ಮಾರುಕಟ್ಟೆಯ ಅಧಃ ಪತನ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಮಧ್ಯೆ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ ತಮ್ಮ ಮಾರಾಟವನ್ನು ಮುಂದುವರೆಸಿರುವುದು ಡಾಲರ್ ಏರಿಳಿತಕ್ಕೆ ಕಾರಣವಾಗಿದೆ.ಎಫ್‌ಪಿಐಗಳು ಗುರುವಾದಂದು ಸುಮಾರು 900ರೂ ಕೊಟಿಗಳಷ್ಟು ಷೇರುಗಳನ್ನು ಮಾರಾಟ ಮಾಡಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಗುರುವಾರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಡಾಲರ್ ಎದುರು ರೂಪಾಯಿ 71.81ರೂಗೆ ಬಿಕರಿಯಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link